ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿ, ಶ್ರೀರಾಮ ಶಾಲೆ , ಸುಲ್ಕೇರಿಯಲ್ಲಿ ದಿನಾಂಕ 30:01:2026 ರ ಶುಕ್ರವಾರ ಎಸ್ಕವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ಶಾಲೆಗೆ ಕೊಡುಗೆಯಾಗಿ ನೀಡಿದ ರೂಪಾಯಿ 1 ಲಕ್ಷ 69 ಸಾವಿರ ಮೌಲ್ಯದ ಸಿಸಿ ಕ್ಯಾಮರಾ ಹಾಗೂ ರೂಪಾಯಿ 3 ಲಕ್ಷ 58 ಸಾವಿರ ಮೌಲ್ಯದ ಜನರೇಟರ್ ಇದರ ಉದ್ಘಾಟನಾ ಕಾರ್ಯಕ್ರಮವು ಜರಗಿತು.
ಕಾರ್ಯಕ್ರಮದಲ್ಲಿ ಎಸ್ಕವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಎ.ಜಿ.ಎಮ್ ಕಾರ್ಪೋರೇಟ್ ಎಚ್ ಆರ್ ಶ್ರೀ ರಾಜೇಶ್, ಸೀನಿಯರ್ ಮ್ಯಾನೇಜರ್ ರಾಘವೇಂದ್ರ ಕೆ , ಕಂಪನಿ ಕಾರ್ಯದರ್ಶಿಗಳಾದ ಮಹೇಶ್ ಕುಮಾರ್, ಸೀನಿಯರ್ ಇಂಜೀನಿಯರ್ ಜೀವನ್ ಶೆಟ್ಟಿ, ಪ್ರೊಡಕ್ಷನ್ ಅಪರೇಟರ್ ಶರತ್ ಹೆಗ್ಡೆ ಸಾವ್ಯ, ಶಾಲಾ ಆಡಳಿತ ಮಂಡಳಿ, ಗೌರವಾಧ್ಯಕ್ಷರಾದ ಗಣೇಶ್ ಹೆಗ್ಡೆ, ಅಧ್ಯಕ್ಷರಾದ ರಾಜು ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ವಿನಿತ್ ಸಾವ್ಯ, ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಹೆಗ್ಡೆ ಉಪಸ್ಥಿತರಿದ್ದರು .
ಎಸ್ಕವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಅಧಿಕಾರಿ ವರ್ಗದವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯು ಜತೆ ಕಾರ್ಯದರ್ಶಿ ನಾರಾಯಣ ಪೂಜಾರಿ, ಕೋಶಾಧಿಕಾರಿಗಳಾದ ಶಶಿಧರ ಶೆಟ್ಟಿ, ಸದಸ್ಯರಾದ ಎಚ್ ಎಲ್ ರಾವ್, ರಾಜೇಶ್ ಶೆಟ್ಟಿ, ದಯಾಕರ ರೈ, ಎಂ ಎಸ್.ಸಿ ಸುಲ್ಕೇರಿಯ ಅಧ್ಯಕ್ಷರಾದ ಸುನೀಲ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

