ಶ್ರೀ ಮಯೂರವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸೂಡ, ಇದರ ಹತ್ತನೇ ವರ್ಷದ ತಿರುಗಾಟದ ಪ್ರಾರಂಭದಲ್ಲಿ ಶ್ರೀ ಮಹಮ್ಮಾಯಿ ಮುಖ್ಯಪ್ರಾಣ ದೇವಸ್ಥಾನ ಮಾರಿಗುಡಿ, ಕಾರ್ಕಳದಲ್ಲಿ ಗುಂಡದ ಗುಳಿಗೆ ಎನ್ನುವ ತುಳು ಯಕ್ಷಗಾನ ಬಯಲಾಟ ನಡೆಯಿತು.
ಪ್ರಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಶೆಟ್ಟಿ ಉದ್ಯಮಿ, ಹಾಗೂ ಯಕ್ಷ ಕಲಾರಂಗ ಇದರ ಅಧ್ಯಕ್ಷರು ವಹಿಸಿ ಕೊಂಡಿದ್ದರು. ಉದ್ಘಾಟನೆಯನ್ನು C.A. ಶ್ರೀ ಕಮ ಲಾಕ್ಷ ಕಾಮತ್ ನೆರವೇರಿಸಿ ಕೊಟ್ಟರು. ನಾಟಕ ಹಾಗೂ ಯಕ್ಷಗಾನ ಕ್ಷೇತ್ರದ ಪ್ರತಿಭೆ ರಾಜೇಶ್ ಕೆಂಚಂಗಿರಿ ಇವರಿಗೆ ಭಾಸ್ಕರ್ ಕುಲಾಲ್, ಶ್ರೀ ಮಾರಿಯಮ್ಮ ಫ್ಲವರ್ ಸ್ಟಾಲ್ ಕಾರ್ಕಳ ಇವರು ಸನ್ಮಾನ ನಡೆಸಿಕೊಟ್ಟರು.
ಗೋಪಾಲ ಕೃಷ್ಣ ಶೆಟ್ಟಿ, ನಿವೃತ್ತ ಪುರಸಭಾಧಿಕಾರಿ ಗಳು ಇವರು ಅಭಿನಂದನ ನುಡಿಗನ್ನು ಆಡಿದರು. ನಿವೃತ್ತ ಬ್ಯಾಂಕ್ ಪ್ರಭಂದಕರಾದ ಕೆ ಎ ಶೆಟ್ಟಿ ಇವರು ಶುಭಾಶOಸನ ನುಡಿಗಳನ್ನು ಆಡಿದರು. ವೇದಿಕೆಯಲ್ಲಿ ಸುನೀಲ್ ಕುಮಾರ್ ಶೆಟ್ಟಿ ವಕೀಲರು ಕಾರ್ಕಳ, ಡಾ.ರವಿರಾಜ್ ಶೆಟ್ಟಿ ಹಿತ ಮೆಡಿಕಲ್ ಕಾರ್ಕಳ, ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ,ಅಧ್ಯಕ್ಷರು ಅನಂತ ಶಯನ ಮಹಿಳಾ ಯಕ್ಷ ಕಲಾ ಮಂಡಳಿ ಕಾರ್ಕಳ ಉಪಸ್ಥಿತರಿದ್ದರು.
ಪ್ರಸಂಗ ಕೃತೃ, ಭಾಗವತ, ಹಾಗೂ ವೃತ್ತಿಯಲ್ಲಿ ಅಧ್ಯಾಪಕರಾಗಿ ಮೇಳದ ಸಂಸ್ಥಾಪಕರಾದ ಹರೀಶ್ ಶೆಟ್ಟಿ ಸೂಡ ಇವರು ಸ್ವಾಗತ ಹಾಗೂ ಪ್ರಸ್ತಾವನೆಗೈದು ಸಹಕರಿಸಿ ಪ್ರೋತ್ಸಾಹಿಸಿ ಸರ್ವರನ್ನು ಸ್ಮರಿಸಿದರು. ಶಾಲಿನಿ ಡಿ ಆಳ್ವ ಕಾರ್ಯಕ್ರಮದ ನಿರೂಪಣೆಗೈದರು.

