ಮುದ್ರಾಡಿ ಸೇವಾ ಸಂಗಮ ಶಿಶುಮಂದಿರ -ರಜತ ಮಹೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

0
37

ಹೆಬ್ರಿ : ಮುದ್ರಾಡಿ ಗ್ರಾಮದ ಸುಬ್ಬಣ್ಣಕಟ್ಟೆಯಲ್ಲಿ ಸ್ಥಾಪನೆಗೊಂಡ ಸೇವಾ ಸಂಗಮ ಶಿಶು ಮಂದಿರ 25 ವರ್ಷಗಳನ್ನು ಪೂರೈಸಿದ ಸಲುವಾಗಿ ವಿದ್ಯಾಭಿಮಾನಿಗಳ ಸಹಕಾರದಿಂದ ರಜತ ಮಹೋತ್ಸವವನ್ನು ಆಚರಿಸಬೇಕು ಎನ್ನುವ ಸಂಕಲ್ಪವನ್ನು ಇಟ್ಟುಕೊಂಡು ರಜತಮಹೋತ್ಸವ ಸಮಿತಿಯನ್ನು ರಚಿಸಲು ಸೇವಾ ಸಂಗಮ ಶಿಶು ಮಂದಿರದಲ್ಲಿ ಸಭೆ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ ಹೆಬ್ಬಾರ್ ಕಾಪೋಳಿ, ಗೌರವಾಧ್ಯಕ್ಷರಾಗಿ ಪದ್ಮನಾಭ ಆಚಾರ್ಯ ಗಿಲ್ಲಾಳಿ,ಗಣಪತಿ ಪೈ ಮುದ್ರಾಡಿ,ಗೌರವ ಸಲಹೆಗಾರರಾಗಿ ದಿವಾಕರ ಎನ್.ಶೆಟ್ಟಿ, ಮಂಜುನಾಥ ಪೂಜಾರಿ ಮುದ್ರಾಡಿ, ಡಾ.ಎಂ.ಎಸ್. ರಾವ್, ಮುದ್ರಾಡಿ, ಗಣಪತಿ ಎಂ, ರವಿ ರಾವ್, ಚಂದ್ರಶೇಖರ ಹೆಗ್ಡೆ ಮುದ್ರಾಡಿ, ಸಂತೋಷ್ ಕುಮಾರ್ ಶೆಟ್ಟಿ ಮುದ್ರಾಡಿ,ಉಪಾಧ್ಯಕ್ಷರಾಗಿ ಸುಧಾಕರ್ ಶೆಟ್ಟಿ ಬರ್ಸಬೆಟ್ಟು, ಗುರುಪ್ರಸಾದ ಹೆಗ್ಡೆ ಕೊಳಂಬೆ, ಸುಲತಾ ಗಂಗಾಧರ ಹೆಗ್ಡೆ ಮುದ್ರಾಡಿ, ಸುರೇಂದ್ರ ಮೂಲ್ಯ ಕೆಲಕಿಲ, ಸುದೀಪ ಶೆಟ್ಟಿ ಬಲ್ಲಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಪೈ ಮುದ್ರಾಡಿ, ಕಾರ್ಯದರ್ಶಿಯಾಗಿ ಎಸ್. ಟಿ. ಶೆಟ್ಟಿಗಾರ್, ಜೊತೆ ಕಾರ್ಯದರ್ಶಿಯಾಗಿ ಅನುಶ್ರೀ ಮಲ್ಯ ವರಂಗ, ಯಶೋದಾ ಶೆಟ್ಟಿ ಸುಬ್ಬಣ್ಣಕಟ್ಟೆ, ಖಜಾಂಚಿಯಾಗಿ ಶ್ರೀಧರ ನಾಯಕ್ ಮುದ್ರಾಡಿ, ಸುಧೀರ ಆಚಾರ್ಯ ಮುದ್ರಾಡಿ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಅನಂತಪದ್ಮನಾಭ ಮಲ್ಯ ವರಂಗ, ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ, ಪ್ರಶಾಂತ್ ಪೈ ಮುದ್ರಾಡಿ, ರಾಜೇಶ್ ರಾವ್ ಮುದ್ರಾಡಿ, ಪ್ರಮೋದ್ ಚಂದ್ರ ಪೈ ಮುನಿಯಾಲು, ಸುಂದರ ಆಚಾರ್ಯ ಗುಂಡಾಳ, ಸಂತೋಷ್ ಪೂಜಾರಿ ನೆಕ್ಕಾರ್ ಬೆಟ್ಟು, ಸುನೀತಾ ಹೆಬ್ಬಾರ್ ಹೆಬ್ರಿ, ಶ್ರೇಯಾ ಕಿಣಿ ಜರುವತ್ತು, ರಮ್ಯಾಕಾಂತಿ ಸುಬ್ಬಣ್ಣಕಟ್ಟೆ, ಪ್ರಮೋದ್ ಶೆಟ್ಟಿಗಾರ್ ಮುದ್ರಾಡಿ ಆಯ್ಕೆಯಾಗಿರುತ್ತಾರೆ.

ಸೇವಾ ಸಂಗಮದ ಶಿಶುಮಂದಿರದ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಸಂಚಾಲಕರಾದ ಶ್ರೀಧರ ನಾಯಕ್, ಮಾಜಿ ಅಧ್ಯಕ್ಷರುಗಳಾದ ಗೋವಿಂದ ಜೋಗಿ ಮತ್ತು ಪದ್ಮನಾಭ ಆಚಾರ್ಯ, ವ್ಯವಸ್ಥಾಪಕಿ ಶಿಲ್ಪಾ ಶ್ರೀಧರ ನಾಯಕ್ ಸಭೆಯಲ್ಲಿ ಉಪಸ್ಥಿತರಿದ್ದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ರಜತಮಹೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಯಿತು. ಏಪ್ರಿಲ್ ನಲ್ಲಿ ನಡೆಸಲು ಉದ್ದೇಶಿಸಿರುವ ರಜತಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸುವಂತೆ ರಜತಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಧರ್ ಹೆಬ್ಬಾರ್ ಕಾಪೋಳಿ ತಿಳಿಸಿದರು.

LEAVE A REPLY

Please enter your comment!
Please enter your name here