ಉಡುಪಿ : ಹಿಂದು ಸಂಗಮ ಆಯೋಜನಾ ಸಮಿತಿ ಉಡುಪಿ ನಗರ ರಥಬೀದಿ ವಸತಿ ಒಳಕಾಡು ವಾರ್ಡ ಮತ್ತು ತೆಂಕಪೇಟೆ ವಾರ್ಡ ವ್ಯಾಪ್ತಿಯಲ್ಲಿ ಪ್ರೆ 1 ರಂದು ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾ ಶೇರಿಗಾರ ಕುಟಂಬಸ್ಥರ ಗದ್ದೆಯಲ್ಲಿ ನಡೆಯಿತು.
ಹಿಂದು ಸಂಗಮದ ಅಂಗವಾಗಿ ಒಳಕಾಡಿನ ಸರಸ್ಪತಿ ಸಭಾ ಭವನದಲ್ಲಿ ಅದಮಾರು ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥ ಶ್ರೀಪಾದರು ಭಾರತಮಾತೆಯ ಭಾವ ಚಿತ್ರಕ್ಕೆ ಆರತಿ ಬೆಳಗಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿ,ನಮ್ಮ ಮನೆಯಲ್ಲಿ ನಾದ ( ಭಜನೆ ದೇವರ ಸ್ಮರಣೆ ) ಇದ್ದಲ್ಲಿ ಸನಾತನ ಇರುತ್ತದೆ,ಪ್ರಕೃತಿಯ ಜೊತೆಯಾಗಿ ಬಾಳ ಬೇಕು,ಪೂಜಿಸಬೇಕು,ಸನಾತನ ಯಾವಾಗಲು ನೂತನವಾಗಿರಬೇಕು,ಸಾಮೂಹಿಕ ಶ್ರೀ ಕೃಷ್ಣ ಮಂತ್ರ ಭೋಧನೆ ಪಠಣ ಮಾಡಿಸಿದರು,ಮಕ್ಕಳಿಗೆ ಆಚಾರ -ವಿಚಾರದ ಜೊತೆಗೆ ಪಠ್ಯ ಕಲಿಸಿಕೊಡಿ,ಸನಾತನ ಹಿಂದೂ ಧರ್ಮದ ರಕ್ಷಣೆ ನಮ್ಮೆಲ್ಲರ ಜವಾಬ್ಧಾರಿಯಾಗಿದ್ದು, ಹಿಂದೂ ಸಮಾಜ ಭಾಂದವರು ಒಟ್ಟಾಗಿ ಕೆಲಸಮಾಡಿ ರಾಮ ರಾಜ್ಯ ನಿರ್ಮಾಣ ಮಾಡೋಣ ಎಂದು ಶುಭ ಹಾರೈಸಿದರು.

ಶೋಭಾ ಯಾತ್ರೆ ಗೆ ಮೆರಗು ನೀಡಿದ ಭಾರತಮಾತೆ,ನಾಸಿಕ್ ಬ್ಯಾoಡ್,ಕಲಶ ಹಿಡಿದು ಮಾತೆಯರು,ಮಹಿಳಾ ಚಂಡೆ , ಕುಣಿತಾ ಭಜನಾ ತಂಡಗಳು,ಸಿಂಗಾರಿ ಮೇಳ ಚೆಂಡೆ ವಾದನದೊಂದಿಗೆ ಭೈಕ್ ವಾಹನ ಜಾಥಾ ಜೊತೆಯಾಗಿ ನೂರಾರು ಹಿಂದೂ ಬಾಂದವರು ಹೆಜ್ಜೆ ಹಾಕಿದರು. ಶೋಭಾಯಾತ್ರೆಯು ಒಳಕಾಡು ಮುಖ್ಯರಸ್ತೆಯಾಗಿ ಸೌತ ಶಾಲೆ , ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ , ರಥ ಬೀದಿ , ವಿಧೋದಯ ಶಾಲೆಯಾಗಿ ಪಾರ್ಕಿಂಗ್ ಏರಿಯಾದ ಸೇರಿಗಾರ ಗದ್ದೆಯಲ್ಲಿ ಹಿಂದೂ ಸಂಗಮದ ಧಾರ್ಮಿಕ ಸಭೆ ನೆಡೆಯಿತು.
ಸಮಾರಂಭದ ವೇದಿಕೆಯಲ್ಲಿ ಧಾರ್ಮಿಕ ಚಿಂತಕರಾದ ವಕ್ತಾರ, ಮೋಹನ ಕುಮಾರ್ ಕುಂಬೈಕರ್ ಧರ್ಮ ರಕ್ಷಣೆ ಕುರಿತು ಮಾತನಾಡಿದರು , ಅಧ್ಯಕ್ಷತೆಯನ್ನು ಯುವ ಉಧ್ಯಮಿ ಅಜಿತ್ ಕುಡ್ವ , ಸಮಾಜ ಸೇವಕಿ ವೀಣಾ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು , ವಾರ್ಡಿನ ಸಮಿತಿಯ ಸದಸ್ಯರು ಉಪಸ್ಥರಿದ್ದರು . ಮಂಜುನಾಥ್ ಹೆಬ್ಬಾರ್ ಸ್ವಾಗತಿಸಿ ,ಶೈಲೇಶ್ ಧನ್ಯವಾದನಿತರು.

