ಕೆಳಾಸುಂಕ : ಶ್ರೀ ಜಟ್ಟಿಗೇಶ್ವರ ಸಪರಿವಾರ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತ್ಯುತ್ಸವ ನಡೆಯಲಿದೆ.
ಬೆಳಗ್ಗೆ 8-30 ರಿಂದ ಜಟ್ಟಿಗೇಶ್ವರ ದೇವರ ಸನ್ನಿಧಿಯಲ್ಲಿ , ಅಷ್ಟೋತ್ತರ ಕುಂಭಾಭಿಷೇಕ, ಪ್ರಧಾನ ಹೋಮ, ಕಲಶಾಭಿಷೇಕ,ಮಹಾಪೂಜೆ ನಾಗ ದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಹೋಮ, ಕಲಶಾಭಿಷೇಕ,ಮಹಾಪೂಜೆ ನಡೆಯಲಿದೆ.
ಮಧ್ಯಾಹ್ನ 12.00 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ , ಮಧ್ಯಾಹ್ನ 12.30 ಕ್ಕೆ ಅನ್ನ ಸಂತರ್ಪಣೆ, ಸಂಜೆ 5.30 ರಿಂದ “ಭಜನಾ ಕಾರ್ಯಕ್ರಮ”, ರಾತ್ರಿ 7.30 ರಿಂದ ಸೇವಾಕರ್ತರಿಗೆ ಗೌರವ ಸಮರ್ಪಣೆ.
ರಾತ್ರಿ 8.30 ರಿಂದ ಅನ್ನ ಸಂತರ್ಪಣೆ .
ಶ್ರೀ ಜಟ್ಟಿಗೇಶ್ವರ ಚಂಡೆ ಬಳಗ ಕೆಳಸುಂಕ ಇವರಿಂದ ಚಂಡೆವಾದನ ನಡೆಯಲಿದೆ.
ಭಜನೋತ್ಸವದಲ್ಲಿ ಭಾಗವಹಿಸುವ ಭಜನಾ ಮಂಡಳಿಗಳು
* ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಕೆಳಾಸುಂಕ
* ಶ್ರೀ ಗಾಳಿಗುಡ್ಡೆ ಮಹಾಗಣಪತಿ ಭಜನಾ ಮಂಡಳಿ ಜಡ್ಡಿನಗದ್ದೆ.
* ಶ್ರೀ ಚತುರ್ಮುಖ ಬ್ರಹ್ಮ ಭಜನಾ ಮಂಡಳಿ ಬಳ್ಮನೆ
* ಶ್ರೀ ಲಕ್ಷ್ಮೀ ನಾರಾಯಣ ಮಹಿಳಾ ಭಜನಾ ಮಂಡಳಿ ಹಳೆ ಸೋಮೇಶ್ವರ
* ಶ್ರೀ ರಾಮ ಭಜನಾ ಮಂಡಳಿ ಬೀಜಾಡಿ ಗೋಪಾಡಿ
* ಶ್ರೀ ಉಮಾಮಹೇಶ್ವರ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಬೆಪ್ಡೆ
* ಶ್ರೀ ಮಹಾಗಣಪತಿ ಭಜನಾ ಮಂಡಳಿ ತೊಂಬಟ್ಟು
* ಶ್ರೀ ಮಹಾವಿಷ್ಣು ಭಜನಾ ಮಂಡಳಿ ಸೋಣಿ
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ವರಿಗೂ ಸ್ವಾಗತ ಬಯಸುವ ಆಡಳಿತ ಮಂಡಳಿ ಶ್ರೀ ಜಟ್ಟಿಗೇಶ್ವರ ಸಪರಿವಾರ ದೇವಸ್ಥಾನ ಕೆಳಾಸುಂಕ.

