ದುಬೈ : ಮಾರ್ಗ ದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿ|| ವಸಂತ ಬೇಕಲ್ ರವರ ಸವಿನೆನಪಿಕಾಗಿ “ಮಾರ್ಗದೀಪ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಶಾರ್ಜಾದ NASS ಕ್ರಿಕೆಟ್ ಸ್ಟೇಡಿಯಂನಲ್ಲಿ ಅದ್ಧೂರಿಯಿಂದ ಜರುಗಿತು.
ಪಂದ್ಯಾಟದಲ್ಲಿ ಮಂಜುನಾಥ ಕಾಸರಗೋಡು ಹಾಗೂ ದಾಮೋದರ ರಾವ್ ರವರ ಮಾಲೀಕತ್ವದ “ಗಡಿನಾಡು ಸ್ಟ್ರೈಕರ್”,ರಘುನಾಥ್ ಎಂ ಹಾಗೂ ಬಿಪಿನ್ ಚಂದ್ರ ನಾಯಕ ಮಾಲೀಕತ್ವದ “ಬೇಕಲ್ ಫೋರ್ಟ್ ರೈಡರ್ಸ್”, ಶ್ರೀಪತಿ ಕೆ ಹಾಗೂ ಕಮಲಾಕ್ಷ ಕೆ ಮಾಲೀಕತ್ವದ “ಕ್ಷತ್ರಿಯ ಲೆಜೆಂಡ್ಸ್” ಹಾಗೂ ನರೇಶ್ ಸಿ ಹೆಚ್ ಹಾಗೂ ಧನಂಜಯ ಸಿ ಹೆಚ್ ಮಾಲೀಕತ್ವದ “ಕೋಟೆ ಹೀರೋಸ್”ಎಂಬ ನಾಲ್ಕು ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಮುಖ್ಯ ಸಂಘಟಕರರಾಗಿ ಸುಧೀರ್ ಎಸ್ ಹಾಗೂ ಶ ಸುಬ್ರಹ್ಮಣ್ಯ ಬಿ.ಕೆ.ಯವರು ಕಾರ್ಯ ನಿರ್ವಹಿಸಿದರು.

ಸಂಘದ ಅಧ್ಯಕ್ಷರಾದ ಮಹೇಶ್ ಚಂದ್ರಗಿರಿ,ಕಾರ್ಯದರ್ಶಿ ಸುನಿಲ್ ರಾವ್ ಹೇರೂರು, ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು,ಕೋಶಾಧಿಕಾರಿಯಾದ ರಾಜೇಶ್ ರಾವ್,ಜೊತೆ ಕಾರ್ಯದರ್ಶಿ ಬಿಪಿನ ಚಂದ್ರ ನಾಯಕ ಹಾಗೂ ಕ್ರೀಡಾ ಕಾಯದರ್ಶಿ ಸುಬ್ರಹ್ಮಣ್ಯ ಬಿ. ಕೆ.ರವರು ಉಪಸ್ಥಿತರಿದ್ದರು.
ಪಂದ್ಯಾಟದ ಚಾಂಪಿಯನ್ಸ್ ತಂಡವಾಗಿ ಬೇಕಲ್ ಫೋರ್ಟ್ ರೈಡರ್ಸ್ ಹಾಗೂ ರನ್ನರ್ಸ್ ಅಪ್ ಆಗಿ ಕೋಟೆ ಹೀರೋಸ್ ತಂಡ ಹೊರಹೊಮ್ಮಿತು.ಸುಗಂಧರಾಜ ಬೇಕಲ್ ರವರು ಸ್ವಾಗತಿಸಿದರ.ಅಜಿತ್ ಕೊರಕೋಡು ಹಾಗೂ ಸತೀಶ್ ಹಂಗಳೂರು ಮುಖ್ಯ ಸಲಹೆಗಾರರಾಗಿದ್ಹರು.ಹರಿಪ್ರಸಾದ್ ಕೋಟೆ ಕಾರ್ಯಕ್ರಮದ ನಿರೂಪಕರಾಗಿದ್ಧರು.


