ಉಡುಪಿಯ ಪ್ರಣ್ವಿ ಪ್ರಕಾಶ್‌ಗೆ ಐಬಿಆರ್ ಅಚೀವರ್ ಗೌರವ

0
40

ಉಡುಪಿ, ಕರ್ನಾಟಕದ ಪ್ರಣ್ವಿ ಪ್ರಕಾಶ್ (ಜನನ: ಆಗಸ್ಟ್ 17, 2023) ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದು, ಐಬಿಆರ್ ಅಚೀವರ್ (IBR Achiever) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಕೇವಲ 2 ವರ್ಷ 4 ತಿಂಗಳ ವಯಸ್ಸಿನಲ್ಲಿ, ಪ್ರಾಣ್ವಿ ಪ್ರಕಾಶ್ ಅವರು 23 ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವುದು, ಮಾನವ ದೇಹದ 22 ಭಾಗಗಳು, 20 ತರಕಾರಿಗಳು, 12 ಹಣ್ಣುಗಳು, 12 ಪಕ್ಷಿಗಳು, 10 ಕಾಡುಪ್ರಾಣಿಗಳು, 11 ವಾಹನಗಳು ಹಾಗೂ 50 ಫ್ಲ್ಯಾಶ್ ಕಾರ್ಡ್‌ಗಳನ್ನು ಗುರುತಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇದಲ್ಲದೆ, ಇಂಗ್ಲಿಷ್ ಮತ್ತು ಕನ್ನಡದಲ್ಲಿ 1ರಿಂದ 10ರವರೆಗೆ ಸಂಖ್ಯೆಗಳನ್ನು ಎಣಿಸುವುದು, ಇಂಗ್ಲಿಷ್ ಹಾಗೂ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಹೇಳುವುದು, ವಾರದ ದಿನಗಳು ಹಾಗೂ ವರ್ಷದ ತಿಂಗಳುಗಳನ್ನು ಪಠಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಈ ಸಾಧನೆಯನ್ನು ಜನವರಿ 9, 2026ರಂದು ಅಧಿಕೃತವಾಗಿ ದೃಢಪಡಿಸಲಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಮಟ್ಟದ ಬೌದ್ಧಿಕ ಸಾಮರ್ಥ್ಯ ಪ್ರದರ್ಶನವು ಪಾಲಕರು ಹಾಗೂ ಶಿಕ್ಷಕರ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here