ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನ (ರಿ.) ದೈಪಿಲ, ಚಾರ್ವಾಕ ದಿನಾಂಕ 07-02-2026ನೇ ಶನಿವಾರ ಸಂಜೆ ಗಂಟೆ 6.00ಕ್ಕೆ ಭಂಡಾರ ತೆಗೆದು , ದಿನಾಂಕ 08-02-2026ನೇ ಆದಿತ್ಯವಾರ ದೈಪಿಲದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆಯಲಿರುವುದು.
ದಿನಾಂಕ: 07-02-2026ನೇ ಶನಿವಾರ ಬೆಳಿಗ್ಗೆ 8.00ಕ್ಕೆ ದೈಪಿಲ ಸ್ಥಾನದಲ್ಲಿ ಸ್ಥಳ ಶುದ್ಧಿ ಹಾಗೂ ಗಣಹೋಮ, ಸಂಜೆ 6.00 ಕ್ಕೆಭಂಡಾರ ತೆಗೆಯುವುದು.
ದಿನಾಂಕ: 08-02-2026ನೇ ಆದಿತ್ಯವಾರ ಬೆಳಿಗ್ಗೆ 7.00ರಿಂದ ನೇಮೋತ್ಸವ ಪ್ರಾರಂಭವಾಗುವುದು , 10.00ಕ್ಕೆ ಮುಂಚಿತವಾಗಿ ಸೇವೆಗಳನ್ನು ಮತ್ತು ಹರಿಕೆಗಳನ್ನು ಒಪ್ಪಿಸುವವರು ದೈವದ ಸನ್ನಿಧಿಗೆ ಆಗಮಿಸಬೇಕು ಹಾಗೇ ಅಪರಾಹ್ನ 2.30ಕ್ಕೆ ಗಡಿಗೆ ಹೊರಡುವುದು, 12.00ರಿಂದ ಅನ್ನಸಂತರ್ಪಣೆ ನಡೆಯಲಿರುವುದು.
ಈ ಪವಿತ್ರ ಕಾರ್ಯಕ್ಕೆ ತಾವು ಬಂಧು ಮಿತ್ರರೊಡಗೂಡಿ ದೈವದ ಸಿರಿಮುಡಿ-ಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಅರುವಗುತ್ತು, ನಾಲ್ಕು ಮನೆಯವರು, 14 ವರ್ಗ, ಕೊಪ್ಪ ಮೂವತ್ತು ಮನೆಯವರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

