ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಪೂರ್ವಕ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

0
10

ಕಾಪು : ಶಿಲಾಮಯ ಸುತ್ತುಪೌಳಿ ನಿರ್ಮಾಣ, ಹೊರಾಂಗಣದ ತಗಡು ಚಪ್ಪರ ನವೀಕರಣ, ಕಲ್ಯಾಣ ಮಂಟಪ ಪ್ರಥಮ ಅಂತಸ್ತು ನಿರ್ಮಾಣದ ಮಹಾ ಕಾಮಗಾರಿಗಳೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಅಣಿಗೊಳ್ಳುತ್ತಿರುವ ಸಾಂತೂರು ಶ್ರೀ ಸುಬ್ರಮಣ್ಯ ದೇವಸ್ಥಾನ ದ ಅರ್ಚಕ ವೃಂದ ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಬ್ರಹ್ಮಕಲಶೋತ್ಸವ ಮುಂಬೈ ಸಮಿತಿಗಳ ಜಂಟಿ ಸಮಾಲೋಚನಾ ಸಭೆಯು ದಿನಾಂಕ 04-02-2026 ರಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಧೀರ್ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಷೇತ್ರದ ಪ್ರಧಾನ ಅರ್ಚಕರಾದ ವೇ.ಮೂ. ಶ್ರೀ ವಿಠಲ ಜೋಯಿಸರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಮುಂಬೈ ಸಮಿತಿಯ ಅಧ್ಯಕ್ಷರಾದ ಸಾಂತೂರು ನಡಿಮನೆ ಚಂದ್ರಶೇಖರ ಶೆಟ್ಟಿಯವರು ಸಮಿತಿಯ ಜವಾಬ್ದಾರಿ ಹಾಗೂ ಸರ್ವ ಗ್ರಾಮಸ್ಥರ ತೊಡಗಿಸುವಿಕೆ ಬಗ್ಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು.

ಉಪಾಧ್ಯಕ್ಷರಾದ ಮುಂಡ್ಕೂರು ಅಂಗಡಿಗುತ್ತು ಪ್ರಸಾದ್ ಎಂ. ಶೆಟ್ಟಿಯವರು ತಮ್ಮ ಅನುಭವದ ಮಾತಿನೊಂದಿಗೆ ಸಮಗ್ರ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.ವೇದಿಕೆಯಲ್ಲಿ ಅನಂತ ತಂತ್ರಿ, ಸಾಮನಾಡಿಗುತ್ತು ರತ್ನಾಕರ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಸಾಂತೂರು ಪರಾಡಿ ದಯಾನಂದ ಹೆಗ್ಡೆ ಉಪಸ್ಥಿತರಿದ್ದರು.

ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸಮಗ್ರ ಮಾಹಿತಿಯನ್ನು ನೀಡಿದರು. ಪಿಲಾರು ಸುಧಾಕರ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಸಮಿತಿಗಳ ಸದಸ್ಯರು, ಸಾಂತೂರು-ಪಿಲಾರು ಗ್ರಾಮಸ್ಥರು, ಭಗವದ್ಭಕ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here