ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನದಲ್ಲಿ ದೈವಗಳ ನೂತನ ಬಿಂಬ ಪ್ರತಿಷ್ಠಾಪನೆ

0
9

ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನ : ನೂತನ ಬಿಂಬ ಪ್ರತಿಷ್ಠೆ

ಹೆಬ್ರಿ : ಶಿವಪುರ ಗ್ರಾಮದ ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನದಲ್ಲಿ ದೈವಗಳ ನೂತನ ಬಿಂಬ ಪ್ರತಿಷ್ಠಾಪನೆ ಮತ್ತು ದೈವಗಳ ವಾರ್ಷಿಕ ನೇಮೋತ್ಸವ ಶನಿವಾರ ನಡೆಯಿತು. ತಂತ್ರಿಗಳಾದ ವೇದಮೂರ್ತಿ ಹೆರ್ಗ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಅರ್ಚಕ ನಾಯರಕೋಡು ರಘುಪತಿ ಭಟ್‌ ನೇತ್ರತ್ವದಲ್ಲಿ ಪ್ರತಿಷ್ಠಾಪನೆಯ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿತು.

ಮೋಕ್ತೆಸರ ರಾಜಾರಾಮ ಹೆಗ್ಡೆ ದಂಪತಿಗಳು ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಗಳ ವಾರ್ಷಿಕ ನೇಮೋತ್ಸವ ನಡೆಯಿತು. ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನದ ಮೋಕ್ತೆಸರ ರಾಜಾರಾಮ ಹೆಗ್ಡೆ, ನಟರಾಜ ಹೆಗ್ಡೆ, ಪ್ರಮುಖರಾದ ಕೆಳಕಜಾನೆ ರಘುರಾಮ ಶೆಟ್ಟಿ, ಕಜಾನೆ ಹೊಸಮನೆ ರಾಜು ಶೆಟ್ಟಿ, ಮೇಲ್‌ ಕಜಾನೆ ಭುಜಂಗ ಶೆಟ್ಟಿ, ಕಜಾನೆ ಪಡುಮನೆ ವಿಶ್ವನಾಥ ಶೆಟ್ಟಿ ಮತ್ತು ಕುಟುಂಬಸ್ಥರು, ಊರಿನ ಪ್ರಮುಖರು, ಗಣ್ಯರು, ಹತ್ತು ಸಮಸ್ತರು ಭಾಗಿಯಾದರು.


LEAVE A REPLY

Please enter your comment!
Please enter your name here