ಬೆಳಾಲು : ಫೆ.10-14ರವರೆಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆರಿಕೋಡಿ ಉತ್ಸವ

0
40

ಬೆಳಾಲು,ಆರಿಕೋಡಿ : ದಿನಾಂಕ 10-02-2026 ರಿಂದ 14-02-2026ರವರೆಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆರಿಕೋಡಿ ಉತ್ಸವವು ನಡೆಯಲಿರುವುದು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ,ಅರಿಕೋಡಿ ಇದರ ವಾರ್ಷಿಕ ಉತ್ಸವದ ಪ್ರಯುಕ್ತ ದಿನಾಂಕ : 10-02-2026ನೇ ಮಂಗಳವಾರದಂದು ಬೆಳಿಗ್ಗೆ ಗಂಟೆ 10.00ಕ್ಕೆ ವೇದಮೂರ್ತಿ ಶ್ರೀ ಶ್ರೀನಿವಾಸ ಹೊಳ್ಳ ಮತ್ತು ಬಳಗದ ಪೌರೋಹಿತ್ಯದಲ್ಲಿ ಪುಣ್ಯಾಹ ಶುದ್ಧಿ, ದೇವತಾ ಪ್ರಾರ್ಥನೆ, ಗಣಹೋಮ ಧನ್ವಂತರಿ ಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಮಹಾ ಪೂಜೆ, ಅನ್ನಸಂತರ್ಪಣೆ ನಡೆಯಲಿರುವುದು , ಹಾಗೂ ಸಂಜೆ ಗಂಟೆ 4.00 ರಿಂದ ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಪೂಜೆ ಹಾಗೂ ವಾಸ್ತು ಬಲಿ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮಗಳು :

ದಿನಾಂಕ 10-02-2026ನೇ ಮಂಗಳವಾರ ಸಾಯಂಕಾಲ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ಹಾಗೂ ರಾತ್ರಿ 8-00ರಿಂದ ಕಲರ್ಸ್‌ ಕನ್ನಡ ತುಳುನಾಡ ಗಾನಗಂಧರ್ವ ಶ್ರೀ ಪುತ್ತೂರು ಜಗದೀಶ್‌ ಆಚಾರ್ಯ ಮತ್ತು ಬಳಗದವರಿಂದ ಭಕ್ತಿಗಾನ ಸಂಭ್ರಮ – ಕುಣಿತಾ ಭಜನಾ ಕಮ್ಮಟೋತ್ಸವ ನಡೆಯಲಿರುವುದು.

ದಿನಾಂಕ 11-02-2026ನೇ ಬುಧವಾರದಂದು ಬೆಳಿಗ್ಗೆ ಗಂಟೆ 8.00 ರಿಂದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಪವಮಾನ ಪಂಚಾಮೃತ ಅಭಿಷೇಕ, ನಾಗತಂಬಿಲ, ಶ್ರೀ ಚಾಮುಂಡೇಶ್ವರಿ ದೇವಿಗೆ ಮಹಾಚಂಡಿಕಾ ಯಾಗ, ಲಲಿತ ಸಹಸ್ರನಾಮ ಕದಳಿಯಾಗ, ಶ್ರೀ ಸೂಕ್ತ ಹೋಮ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ ಗಂಟೆ 6.00 ರಿಂದ ಆಶ್ಲೇಷಾ ಬಲಿ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾಪೂಜೆ, ವನದುರ್ಗಾ ಹೋಮ, ಶ್ರೀ ಚಾಮುಂಡೇಶ್ವರೀ ಅಮ್ಮನವರಿಗೆ ರಂಗಪೂಜೆ ಜರಗಲಿರುವುದು.

ಅಂದೇ ಸಾಯಂಕಾಲ ಗಂಟೆ 6-00 ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ,ಪಾವಂಜೆ ಇವರು ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯಾ ಕಥಾ ಬಾಗವನ್ನು ಬಯಲಾಟವಾಗಿ ಆಡಿತೋಲಿಸಲಿರುವರು ಹಾಗೂ ಸಂಜೆ ಗಂಟೆ 6-00ಕ್ಕೆ ಸರಿಯಾಗಿ ಚೌಕಿ ಪೂಜೆ ಜರಗುವುದು.

12-02-2026ನೇ ಗುರುವಾರದಂದು ಶ್ರೀ ನಾಗದೇವರಿಗೆ ನಾಗತಂಬಿಲ ಗಣಹೋಮ, ಕಲಶ ಪೂಜೆ, ಕಲಶ ಪ್ರಧಾನ ಹೋಮ, ಪರಿವಾರ ಪೂಜೆ, ಕಲಶಾಭಿಷೇಕ ಮಹಾಪೂಜೆ, ಪಲ್ಲಪೂಜೆ,ಮಹಾ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6-00ರಿಂದ ” ಕುಸಾಲ್ದ ಗುರಿಕಾರೆ” ದಿನೇಶ್‌ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ, ಯಕ್ಷತೆಲಿಕೆ ಎಂಬ ಯಕ್ಷ ಹಾಸ್ಯ ವೈಭವ ನಡೆಯಲಿರುವುದು. ಅಂದೇ ರಾತ್ರಿ ಗಂಟೆ 8-00ರಿಂದ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ ಜರುಗಲಿದೆ.

13-02-2026 ಶುಕ್ರವಾರದಂದು ಬೆಳ್ಳಿಗ್ಗೆ ಗಂಟೆ 11-30ಕ್ಕೆ ಶ್ರೀ ದೇವಿ ಚಾಮುಂಡೇಶ್ವರಿ ದೇವಿಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿರುವುದು.ಸುಂಕಾಲ ಗಂಟೆ 5-00ರಿಂದ ಊರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು ಹಾಗೂ ಸಾಯಂಕಾಲ ಗಂಟೆ 7-00ರಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮೇಘ ಕಲಾ ಆರ್ಟ್ಸ್ ಮತ್ತು ಡ್ಯಾನ್ಸ್ ಸ್ಟುಡಿಯೋ ದರ್ಬೆ, ಪುತ್ತೂರು ಇವರಿಂದ ಕಲಾ ಸಂಭ್ರಮ ನಡೆಯಲಿರುವುದು, ಹಾಗೂ 8-30ರಿಂದ ಮಲದಾರ ಪ್ರಶಸ್ತಿ ವಿಜೇತ ಕುಂದಾರ ಕಲಾವಿದರು, ಉಚಿತ ಅಭಿನಯದ ತುಳು ರಂಗ ಭೂಮಿಯಲ್ಲಿ ದಾಖಲೆ ನಿರ್ಮಿಸಿದ “ಅಜ್ಜಿಗ್‌ ಏರ್ಲಾ ಇಜ್ಜಿ ” ತುಳು ಹಾಸ್ಯಮುಯ ನಾಟಕ ನಡೆಯಲಿರುವುದು.

ದಿನಾಂಕ : 14-02-2026 ಶನಿವಾರದಂದು ಸಂಜೆ ಗಂಟೆ 6.00 ರಿಂದ ಈಶಾ ಕಲಾ ಪ್ರತಿಷ್ಠಾನ ಬೆಳಾಲು ಇದರ ನೃತ್ಯ ಶಿಕ್ಷಕಿಯಾದ ನಾಟ್ಯ ವಿಶಾರದೆ ಕವಿತಾ ಉಮೇಶ್‌ ಇವರ ಶಿಷ್ಯ ವೃಂದದವರಿಂದ ಭರತನಾಟ್ಯಂ ಸಂಜೆ ಗಂಟೆ 8:00 ರಿಂದ ಸಾಯಿಶಕ್ತಿ ಕಲಾಬಳಗ ದವರ ವತಿಯಿಂದ ಜೋಡು ಜೀಟಿಗೆ ರಾತ್ರಿ ಗಂಟೆ 9:00 ಕ್ಷೇತ್ರದ ಪರಿವಾರ ದೈವಗಳಾದ ಕಲ್ಲುರ್ಟಿ, ಮಂತ್ರದೇವತೆ, ಸನ್ಯಾಸಿ ಗುಳಿಗ, ಶಕ್ತಿ ಗುಳಿಗ ಹಾಗೂ
ಇತರ ದೈವಗಳಿಗೆ ನೇಮೋತ್ಸವ ಜರಗಿಸುವುದಾಗಿ ನಿಶ್ಚಯಿಸಿರಿತ್ತೇವೆ.

ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಜರಗುವ ಸೇವಾ ಕಾರ್ಯಕ್ರಮಗಳು

ಅನ್ನದಾನ ಸೇವೆ 5000, ಮಹಾಪೂಜೆ 1000, ಸರ್ವಸೇವೆ 500, ಅಲಂಕಾರ ಪೂಜೆ 300, ನಾಗತಂಬಿಲ 250, ಚಂಡಿಕಾ ಯಾಗ 250, ಮೃತ್ಯುಂಜಯ ಹೋಮ 250, ಆಶ್ಲೇಷಾ ಬಲಿ 250, ದುರ್ಗಾ ಪೂಜೆ 250, ರಂಗ ಪೂಜೆ 250, ಶ್ರೀ ಸತ್ಯನಾರಾಯಣ ಪೂಜೆ 250, ಲಲಿತ ಸಹಸ್ರ ನಾಮ ಕದಲಿಯಾಗ 250, ಹೂವಿನ ಪೂಜೆ 100, ಹಲ್ವ ಪ್ರಸಾದ 80, ಪಂಚಕಜ್ಜಾಯ 50, ಕುಂಕುಮಾರ್ಚನೆ 30 ಜರಗಲಿದೆ.

LEAVE A REPLY

Please enter your comment!
Please enter your name here