ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ ದಿನಾಂಕ 10-02-2026 ರಂದು ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇಲ್ಲಿ 2025-26 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರದ ಮೊದಲನೇಯ ಹಂತದ ಪರೀಕ್ಷಾ ಶಿಬಿರವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ತಿಲಕಾ ಅನಂತವೀರ ಜೈನ್ ರವರು ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಕೆ,ಕಬ್ ವಿಭಾಗದ ನಾಯಕಿ ಶ್ರೀಮತಿ ಗೀತಾ ಶೆಟ್ಟಿ Pre ALT (C), ಬುಲ್ ಬುಲ್ ವಿಭಾಗದ ನಾಯಕಿ ಶ್ರೀಮತಿ ಸಂಧ್ಯಾ ಶೆಣೈ ALT (F) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಕಾರ್ಯದರ್ಶಿ ಶ್ರೀ ಪ್ರತೀಮ್ ಕುಮಾರ್ ರವರು ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪರೀಕ್ಷಾ ಶಿಬಿರ ಸಹಾಯಕರಾಗಿ ಕಬ್ ವಿಭಾಗದಲ್ಲಿ ಶ್ರೀಮತಿ ಸ್ವರ್ಣಾ ಡಿ,ಶ್ರೀಮತಿ ಜಯಶ್ರೀ,ಶ್ರೀಮತಿ ಸೀಮಾ,ಕು.ಅಶ್ವಿನಿ ಅಮೀನ್,ಶ್ರೀಮತಿ ಸವಿತಾ ಮೊನೀಸ್,ಶ್ರೀ ಕಿಶೋರ್ ಕುಮಾರ್,ಬುಲ್ ಬುಲ್ ವಿಭಾಗದ ಸಹಾಯಕರಾಗಿ ಶ್ರೀಮತಿ ಕಾಮಾಕ್ಷಿ HWB(F), ಶ್ರೀಮತಿ ರೂಪಾ,ಕು.ಹರ್ಷಿಣಿ,ಕು. ಡಾಲಿಯ ಡಿ ಸೋಜಾ,ಶ್ರೀಮತಿ ಶ್ರುತಿ,ಶ್ರೀಮತಿ ಸುರೇಖಾ,ಶ್ರೀಮತಿ ಕಾವ್ಯ,ಶ್ರೀಮತಿ ಸುಜಾತಾ ಶೆಟ್ಟಿ ಸಹಕರಿಸಿದರು.
ಶಿಬಿರದಲ್ಲಿ 84 ಕಬ್ಸ್,82 ಬುಲ್ ಬುಲ್ಸ್ ಒಟ್ಟು 166 ಶಿಬಿರಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮವನ್ನು ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯ ಗೈಡ್ ಕ್ಯಾಪ್ಟನ್ ಶ್ರೀಮತಿ ವಿನಯ ನಿರೂಪಿಸಿ,ಶ್ರೀಮತಿ ಜಯಶ್ರೀ ವಂದನಾರ್ಪಣೆಗೈದರು.

