ಶ್ರೀ ಕ್ಷೇತ್ರ ಮೂಡು ಸಗ್ರಿ ವರ್ತೆ ಕಲ್ಕುಡ ದೈವಗಳ ವಾರ್ಷಿಕ ನೇಮೋತ್ಸವ ದಿನಾಂಕ 14-02-2026 ರ ಶನಿವಾರದ ಜರಗಲಿದೆ.
ಸ್ವಾಮಿ ಮುಖ್ಯಪ್ರಾಣ ದೇವರನ್ನು ವಿಶೇಷವಾಗಿ ಭಕ್ತಿ ಮಾಡುತ್ತಿದ್ದ ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಭಾಸ್ಕರ್ ಗುಂಡಿ ಬೈಲ್ ಅವರಿಗೆ ಬಾಲ್ಯದ ಪ್ರಾಯದಲ್ಲಿ ಒಲಿದು ಬಂದ ಕಾರಣೀಕ ಶಕ್ತಿ ಶ್ರೀ ಕಲ್ಕುಡ ಸ್ವಾಮಿಯ ಸಿರಿ ಸಿಂಗಾರ ನೇಮೋತ್ಸವ 14-02-2026 ರ ಶನಿವಾರದಂದು ಬೆಳಿಗ್ಗೆ ಸರ್ವ ಶಕ್ತಿಗಳಿಗೆ ಪ್ರಾರ್ಥನಾ ಪೂಜೆ ತುಲ ಭಾರ ಸೇವೆ ಚಪ್ಪರಮೂರ್ತ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ದೈವಗಳ ಬಂಡಾರ ನೇಮೋತ್ಸವದ ಚಪ್ಪರ ಪ್ರವೇಶ ಹಾಗೂ ಮಧ್ಯಾಹ್ನ ಮಹಾ ಸಂತರ್ಪಣೆ ನಡೆಯಲಿದೆ.

ಹಾಗೂ ರಾತ್ರಿ 7:30ಕ್ಕೆ ಸರಿಯಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ರಾತ್ರಿ 9:30ಕ್ಕೆ ಸರಿಯಾಗಿ ದೈವಗಳ ನೇಮೋತ್ಸವ ಜರಗಲಿದೆ. ಈ ಒಂದು ಪುಣ್ಯದ ಕಾರ್ಯದಲ್ಲಿ ಊರ ಪರವೂರಿನ ಕ್ಷೇತ್ರದ ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಮೂಡು ಸಗ್ರಿ ಕ್ಷೇತ್ರದ ಧರ್ಮದರ್ಶಿಗಳಾದ ಭಾಸ್ಕರ್ ಗುಂಡಿ ಬೈಲ್ ಈ ಒಂದು ನೇಮೋತ್ಸವದ ನೇರ ಪ್ರಸಾರವನ್ನು ನಮ್ಮ ಉಡುಪಿ ಟಿವಿ ವಾಹಿನಿಯಲ್ಲಿ ನೋಡಬಹುದು.

ವರದಿ ವಿನೋದ್ ಶೆಟ್ಟಿ ಉಡುಪಿ

