ಬೆಂಗಳೂರು : ಸ್ಕೂಟರ್‌ಗೆ ಶಾಲಾ ಬಸ್ ಡಿಕ್ಕಿ : ಇಬ್ಬರು ಮಕ್ಕಳು ಮೃತ್ಯು

0
2

ಬೆಂಗಳೂರು : ಅತಿವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಶಾಲಾ ಬಸ್ಸೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಪುಟ್ಟ ಮಕ್ಕಳು ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಚೂರು ಮೂಲದ ನಾಗನಗೌಡ ಮಾಲಿಪಾಟೀಲ್‌ ಎಂಬುವವರು ಸಿಎಆರ್‌ ಹೆಡ್‌ಕಾನ್ಸ್ ಟೆಬಲ್‌ ಆಗಿದ್ದು, ಅವರ ಮಗಳು ವರ್ಷಾ (2) ಹಾಗೂ ಅಣ್ಣನ ಮಗಳು ಭಾನು (4) ಮೃತಪಟ್ಟ ಕಂದಮಗಳು.

ಬೆಳಗ್ಗೆ ಹಾಲು ತರಲು ನಾಗನಗೌಡ ಅವರು ತಮ ಡಿಯೋ ಸ್ಕೂಟರ್‌ನಲ್ಲಿ ಈ ಇಬ್ಬರು ಮಕ್ಕಳನ್ನು ಮುಂದೆ ನಿಲ್ಲಿಸಿಕೊಂಡು ಥಣಿಸಂದ್ರದ ಪಿಟಿಎಸ್‌‍ ಕಡೆಯಿಂದ ಹೆಗಡೆ ನಗರದ ಕಡೆಗೆ ಹೋಗುತ್ತಿದ್ದಾಗ 3ನೆ ಕ್ರಾಸ್‌‍ ಕಡೆಯಿಂದ ಶಾಲಾ ಬಸ್‌‍ ಬರುತ್ತಿರುವುದನ್ನು ಗಮನಿಸಿ ತಕ್ಷಣ ಸ್ಕೂಟರ್‌ ನಿಲ್ಲಿಸಿದ್ದಾರೆ.

ಶಾಲಾ ಬಸ್‌‍ ಅತಿ ವೇಗವಾಗಿ ಸ್ಕೂಟರ್‌ ಬಳಿಯೇ ಬಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಬಸ್‌‍ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಆ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರಿಶೀಲಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಸುದ್ದಿ ತಿಳಿದು ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಶಾಲಾ ಬಸ್‌‍ ಚಾಲಕನ ನಿರ್ಲಕ್ಷ್ಯತೆ ಹಾಗೂ ಅಜಾಗರೂಕತೆ ಚಾಲನೆಯಿಂದ ಅಪಘಾತ ಸಂಭವಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here