ವಿಜಯವಾಣಿ ವಿಜಯೋತ್ಸವ ವಿಜೇತರಿಗೆ ಕೊಡುಗೆ ವಿತರಣೆ : ಅಗರಿ ಉತ್ಸವ ಬಹುಮಾನಗಳ ಶತಕ

0
30

ಮೂಡುಬಿದಿರೆಯಲ್ಲಿ ವಿಜಯವಾಣಿ ವಿಜಯೋತ್ಸವ ಹಾಗೂ ಅಗರಿ ಹಬ್ಬಗಳ ಉತ್ಸವದ ಬಹುಮಾನ ವಿತರಣೆ ನಡೆಯಿತು. ಅಗರಿ ಸಂಸ್ಥೆ ಮಾಲೀಕ ಅಗರಿ ರಾಘವೇಂದ್ರ ರಾವ್, ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಧರ್ಮದರ್ಶಿ ಜೀವಂದರ್ ಕುಮಾರ್, ವಿಜಯವಾಣಿ ಮಂಗಳೂರು ಸಹಾಯಕ ಮಾರ್ಕೆಟಿಂಗ್ ವ್ಯವಸ್ಥಾಪಕ ಸಂತೋಷ್ ಬಂಗೇರ, ಡಿಆರ್‌ಎಫ್‌ಒ ಗುರುಮೂರ್ತಿ ಟಿ., ಬೆದ್ರ ಇಲೆಕ್ಟಿಕಲ್ಸ್ ಮಾಲೀಕ, ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಅಗರಿ ಎಂಟರ್‌ಪ್ರೈಸಸ್‌ ಫರ್ನಿಚರ್ಸ್ ಮತ್ತು ಇಲೆಕ್ಟ್ರಾನಿಕ್ಸ್ ವತಿಯಿಂದ ಆಯೋಜಿಸಿರುವ “ಅಗರಿ ಹಬ್ಬ ಹಬ್ಬಗಳ ಉತ್ಸವ ಬಹುಮಾನಗಳ ಶತಕ’ ಪ್ರತಿದಿನ ಒಂದು ಬಹುಮಾನ, 100 ದಿನ 100 ಬಹುಮಾನದ 9ನೇ ಹಂತದ 4ನೇ ಡ್ರಾ, ಕಳೆದ ಬಾರಿಯ ಬಹುಮಾನ ಹಾಗೂ ವಿಜಯವಾಣಿ ಆಯೋಜಿಸಿದ ವಿಜಯೋತ್ಸವದ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಮೂಡುಬಿದಿರೆ ಪ್ರೆಸ್ಟೀಜ್ ಟವರ್‌ನ ಶಾಖೆಯಲ್ಲಿ ಮಂಗಳವಾರ ನಡೆಯಿತು.

ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಧರ್ಮದರ್ಶಿ ಜೀವಂದರ್ ಕುಮಾರ್, ವಿಜಯವಾಣಿ ಮಂಗಳೂರು ಸಹಾಯಕ ಮಾರ್ಕೆಟಿಂಗ್ ವ್ಯವಸ್ಥಾಪಕ ಸಂತೋಷ್ ಬಂಗೇರ, ಉಪವಲಯ ಅರಣ್ಯಾಧಿಕಾರಿ ಗುರುಮೂರ್ತಿ ಟಿ., ಬೆದ್ರ ಇಲೆಕ್ಟಿಕಲ್ಸ್ ಮಾಲೀಕ, ಮೂಡುಬಿದಿರೆ ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್‌ ಕುಮಾರ್, ಎಡಪದವು ಸ್ವಾಮಿ ವಿವೇಕಾನಂದ ಪಿಯು ಕಾಲೇಜು ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಮೊಗೆರಾಯ, ಎಂ.ಸಿ.ಎಸ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖ‌ರ್ ಎಂ., ಮುತ್ತೂಟ್ ಫೈನಾನ್ಸ್ ಬ್ರಾಂಚ್ ಮ್ಯಾನೇಜರ್ ಯೋಗೀಶ್, ಎಎಸ್ ಎಂ ಲಾಯ್ಡ್ ಸರ್ವೀಸ್‌ನ ರಾಘವೇಂದ್ರ ಎಸ್., ತಸ್ಮಿಯಾ ಫೆನೆಸ್ಟೇಷನ್ ಎಲ್‌ಎಲ್‌ಪಿ ನಿಸಾ‌ರ್ ಅಹ್ಮದ್ ಮುಖ್ಯ ಅತಿಥಿಯಾಗಿದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲ್ ಎ.ಕೋಟ್ಯಾನ್ ಮಾರೂರು ಹಾಗೂ ರುಕ್ಕಯ್ಯ ಪೂಜಾರಿ ಅಳಿಯೂರು ಅವರನ್ನು ಸನ್ಮಾನಿಸಲಾಯಿತು.

ಅಗರಿ ಸಂಸ್ಥೆ ಮಾಲೀಕ ಅಗರಿ ರಾಘವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿ, ಸಂಸ್ಥೆ ಪ್ರತಿದಿನ ಗ್ರಾಹಕರಿಗೆ ಬಹುಮಾನ ನೀಡುವ ಯೋಜನೆ ಕಾರ್ಯಗತಗೊಳಿಸಿದೆ. ಇದು ಸಂಸ್ಥೆ, ಗ್ರಾಹಕರು, ವಿವಿಧ ಬ್ರಾಂಡ್ ಹಾಗೂ ಫೈನಾನ್ಸ್ ಸಂಸ್ಥೆಗಳ ಸಮಾಗಮಕ್ಕೂ ಉತ್ತಮ ವಾತಾವರಣ ಸೃಷ್ಟಿಸಿ, ಬಾಂಧವ್ಯ ವೃದ್ಧಿಸಿದೆ. ವಿಜಯವಾಣಿ ಪತ್ರಿಕೆ ವಿಜಯೋತ್ಸವದಲ್ಲಿ ಅಗರಿ ಸಂಸ್ಥೆ ಗ್ರಾಹಕರಿಗೆ ಕಾರು ಸಹಿತ ವಿವಿಧ ಬಹುಮಾನಗಳು ಬರುತ್ತಿರುವುದು ಸಂಸ್ಥೆಗೆ ಹೆಮ್ಮೆ ಎಂದರು.

ಸಂಸ್ಥೆಯ ಹಿರಿಯ ವ್ಯವಸ್ಥಾಪಕ ವಾದಿರಾಜ್ ರಾವ್, ಶಾಖೆಯ ಮೇ ವೇಶ ನೇಜರ್ ಸುನೀಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಅಬ್ದುಲ್ ರಫೀಝ್ ಕಾರ್ಯಕ್ರಮ ನಿರೂಪಿಸಿದರು.

ವಿಜಯೋತ್ಸವ ಕ್ವಿಡ್ ಕಾರು ಹಸ್ತಾಂತರ

ವಿಜಯವಾಣಿ ವಿಜಯೋತ್ಸವ ಯೋಜನೆ ಬಂಪ‌ರ್ ಬಹುಮಾನ ರೆನಾಲ್ಡ್ ಕ್ವಿಡ್ ಕಾರನ್ನು ಸೂರಜ್ ಶೆಟ್ಟಿ ವಾಲ್ಪಾಡಿ ಅವರಿಗೆ ಅಗರಿ ಸಂಸ್ಥೆ ಮಾಲೀಕ ಅಗರಿ ರಾಘವೇಂದ್ರ ರಾವ್ ಹಸ್ತಾಂತರಿಸಿದರು. ಜೀವಂದರ್‌ ಕುಮಾರ್, ಸಂತೋಷ್ ಬಂಗೇರ, ಗುರುಮೂರ್ತಿ ಟಿ., ಪ್ರಸಾದ್ ಕುಮಾರ್, ಸುಬ್ರಹ್ಮಣ್ಯ ಮೊಗೆರಾಯ ಮತ್ತಿತರರು ಇದ್ದರು.

ವಿಜಯವಾಣಿ ವಿಜಯೋತ್ಸವ ಯೋಜನೆ ಬಂಪರ್ ಬಹುಮಾನ ರೆನಾಲ್ಡ್‌ ಕ್ವಿಡ್ ಕಾರನ್ನು ಸೂರಜ್ ಶೆಟ್ಟಿ ವಾಲ್ಪಾಡಿ ಅವರಿಗೆ ಹಸ್ತಾಂತರಿಸಲಾಯಿತು. ವಿಜಯೋತ್ಸವದ ಇತರ ವಿಜಾರಾದ ಯಶವಂತಿ ಪೊಳಲಿ, ರೇಖಾ ಬೋರುಗುಡ್ಡೆ, ಲಕ್ಷ್ಮಣ್ ಗುರುಪುರ, ಜೋಹಾರ ಮೂಡುಬಿದಿರೆ, ಅಜಯ್ ಆಚಾರ್ಯ ಅವರಿಗೆ ಬಹುಮಾನ ವಿತರಿಸಲಾಯಿತು.

ಅಗರಿ ಹಬ್ಬ ಹಬ್ಬಗಳ ಉತ್ಸವದ ವಿಜೇತರಾದ ಲೀನಾ ಫರ್ನಾಂಡಿಸ್‌ ದರೆಗುಡ್ಡೆ, ದಿನೇಶ್ ಮಿಜಾರ್, ನಾಗೇಶ್ ಕೊಡಂಗಲ್ಲು, ಪ್ರೇಮಾ ಮೂಡುಬಿದಿರೆ, ವನಜಾ ಮೂಡುಬಿದಿರೆ, ಆಶಾಲತಾ ಅಳೆಯೂರು, ಫರಾಹನಿಷಾ ರಜಾಕ್ ಪಲಿಮಾರು ಅವರಿಗೆ ಬಹುಮಾನ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here