ಅಖಿಲ ಭಾರತ ರೈತ ಕಾರ್ಮಿಕರ ಮಹಾಮಷ್ಕರ

0
18

ವರದಿ ರಾಯಿ ರಾಜ ಕುಮಾರ

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ, ಸಂಯುಕ್ತ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ, ವಿವಿಧ ನೌಕರರ ಸಂಘಟನೆಗಳು, ಜನಪದ ಸಂಘಟನೆಗಳ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತ ರೈತ ಕಾರ್ಮಿಕರ ಮಹಾ ಮುಷ್ಕರ ಫೆಬ್ರವರಿ 12ರಂದು ನಡೆಯಿತು.

ದೇಶ ವ್ಯಾಪಿ ಹಡೆಯುತ್ತಿರುವ ರೈತ ಕಾರ್ಮಿಕರ ಮಹಾಮಷ್ಕರಕ್ಕೆ ಬೆಂಬಲ ನೀಡುತ್ತಾ ಮೂಡುಬಿದಿರೆಯಲ್ಲಿಯೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ನೇತೃತ್ವವನ್ನು ಕಾರ್ಮಿಕ ಮುಂದಾಳುಗಳಾದ ರಾಧಾ, ರಮಣಿ, ಯಾದವ ಶೆಟ್ಟಿ, ವಸಂತ ಆಚಾರಿ, ಲಕ್ಷ್ಮಿ, ಗಿರಿಜಾ ಹಾಗೂ ಇತರರು ವಹಿಸಿದ್ದರು.

ಬಸ್ ನಿಲ್ದಾಣದ ಸಮೀಪದಿಂದ ಒಗಟ ಮೆರವಣಿಗೆ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ಎದುರಿಗೆ ಸಮಾಪ್ತಿಗೊಂಡಿತು. ಪ್ರತಿಭಟನೆಯಲ್ಲಿ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿರುವುದರ ವಿರುದ್ಧ, ಕಾರ್ಪೊರೇಟ್ ಪದ ರೂಪಿಸಿರುವ ನಾಲ್ಕು ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ, ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗಳನ್ನು ವಿರೋಧಿಸಿ ಮುಂದಾಳುಗಳು ಭಾಷಣವನ್ನು ಮಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾನೂನುಗಳನ್ನು ವಿರೋಧಿಸುವ ಘೋಷಣೆಯನ್ನು ಹೊಮ್ಮಿಸಿದರು. ದುಡಿಯೋ ವರ್ಗದ, ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಕರೆಕೊಡಲಾಯಿತು. ಅದೇ ರೀತಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿಯನ್ನು, ಬಾಕಿ ವೇತನವನ್ನು ಪೂರ್ತಿ ಪಾವತಿ ಮಾಡುವಂತೆ ಒತ್ತಾಯಿಸಲಾಯಿತು. ದೇಶದ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಕಾರ್ಮಿಕ ಸಮ್ಮೇಳನವನ್ನು ನಡೆಸಿ ಅಭಿಪ್ರಾಯವನ್ನು ಸಂಗ್ರಹಿಸಿ ಜನ ಕಲ್ಯಾಣವನ್ನು ನಡೆಸಬೇಕೆಂದು ಒತ್ತಾಯಿಸಲಾಯಿತು.

LEAVE A REPLY

Please enter your comment!
Please enter your name here