ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಫೆಬ್ರವರಿ 16ರಂದು 20ನೇ ವರ್ಷದ ಅಬ್ಬನಡ್ಕ ಮಹಾಶಿವರಾತ್ರಿ ಸಂಭ್ರಮ ಮತ್ತು 5ನೇ ವರ್ಷದ ಅಬ್ಬನಡ್ಕ ಭಜನೋತ್ಸವ ಕಾರ್ಯಕ್ರಮ

0
50

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ಫೆಬ್ರವರಿ 16ರಂದು ಸೋಮವಾರ 20ನೇ ವರ್ಷದ ಅಬ್ಬನಡ್ಕ ಮಹಾಶಿವರಾತ್ರಿ ಸಂಭ್ರಮ ಮತ್ತು 5ನೇ ವರ್ಷದ ಅಬ್ಬನಡ್ಕ ಭಜನೋತ್ಸವ ಕಾರ್ಯಕ್ರಮ ಜರಗಲಿದೆ.

ಆ ಪ್ರಯುಕ್ತ ಸಂಜೆ ಗಂಟೆ 06-00ರಿಂದ ಸ್ಥಳೀಯ ವಿವಿಧ ಭಜನಾ ಮಂಡಳಿಯ 300ಕ್ಕೂ ಅಧಿಕ ಮಂದಿಯಿAದ ಏಕಕಾಲದಲ್ಲಿ ಮೊಳಗಲಿದೆ ಅಬ್ಬನಡ್ಕ ಭಜನೋತ್ಸವ ಸಂಭ್ರಮ, ರಾತ್ರಿ ಗಂಟೆ 07-30ರಿಂದ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಪೂಜೆ, ರಾತ್ರಿ ಗಂಟೆ 08-00ರಿಮದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 08-3ರಿಂದ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ಭಜನೆಯ ಬಗ್ಗೆ ಸಂದೇಶ ಸಾರುವ ಕಿರುನಾಟಕ “ಭಜನಾಮೃತ” ಹಾಗೂ ರಾತ್ರಿ ಗಂಟೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸದಸ್ಯರಿಂದ “ಧರ್ಮ ದಂಟಡೆ” ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸುರೇಶ್ ಅಬ್ಬನಡ್ಕ ಹಾಗೂ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here