
ನಿನ್ನೆ ರಾತ್ರಿ ಬಂದ ಗಜರಾಜ ಪೆ.12 ರಂದು ಮತ್ತೆ ಕುಮಾರ್ ಪೆರ್ನಾಜೆ ಯವರ ಕೆರೆಯಲ್ಲಿ ಈಜಾಡಿ ಗಜರಾಜ ಒಂದು ಅಡಿಕೆ ಮರ ಈಚಲ ಮರ ತಿಂದು ತೇಗಿ ತದನಂತರ ಸಮೀಪದ ರಾಘವೇಂದ್ರ ಭಟ್ರ ತೋಟಕ್ಕೆ ನುಗ್ಗಿ ಹತ್ತಕ್ಕೂ ಹೆಚ್ಚು ಬಾಳೆಯನ್ನು ದ್ವಂಸ ಮಾಡಿ ಬಂದ ದಾರಿಯಲ್ಲೇ ಹಿಂತಿರುಗಿ ಮುಗೇರು ಗುಡ್ಡಡ್ಕ ಆನೆಗುಂಡಿ ಕಡೆ ತೆರಳಿರುವ ಶಂಕೆ ರಾತ್ರಿ ಅರಣ್ಯ ಇಲಾಖೆಯವರು ಸೈರನ್ ಮೊಳಗಿಸಿದರು. ದಾಂದಲೆ ಮಾಡಿ ಲಕ್ಷಾಂತರ ರೂ ಸರಕಾರ ಖರ್ಚು ಮಾಡಿ ಸೋಲಾರ್ ಬೇಲಿ ಅಳವಡಿಸಿದರು ಅದರ ನಿರ್ವಹಣ ವೆಚ್ಚವಿಲ್ಲದೆ ಊಟಕ್ಕೆ ಇಲ್ಲದ ಉಪ್ಪಿನ ಕಾಯಂತಾಗಿದೆ ಎಂದು ಕೃಷಿಕರು ತಮ್ಮ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಸರಕಾರ ಇದರ ಬಗ್ಗೆ ಸೂಕ್ತ ಕ್ರಮ ವಹಿಸಿಕೊಳ್ಳಬೇಕೆಂದು ಊರಿನ ಕೃಷಿಕರು ಗ್ರಾಮಸ್ಥರು ಒತ್ತಾಯಿದ್ದಾರೆ.

