ದಾವಣಗೆರೆ : ಚಿಕ್ಕಮಗಳೂರಿನ ರಚಿತ ಮಹಿಳಾ ಸಮಾಜದಿಂದ ದಾವಣಗೆರೆಯ ಸಾಲಿಗ್ರಾಮ ಗಣೇಶ್ ಶೆಣೈ ದಂಪತಿಗಳಿಗೆ ಇತ್ತೀಚಿಗೆ ಚಿಕ್ಕಮಗಳೂರಿನ ಎಂ.ಎಲ್.ಪಿ.ರೋಟರಿ ಸಭಾಂಗಣದಲ್ಲಿ “ಆದರ್ಶ ದಂಪತಿಗಳು” ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ರಚಿತ ಮಹಿಳಾ ಸಮಾಜದ ಅಧ್ಯಕ್ಷರಾದ ಕವಿತಾ ಗೋಪಾಲ್‌ರವರು ತಿಳಿಸಿದ್ದಾರೆ.
ರಚಿತ ಮಹಿಳಾ ಸಮಾಜದ 29ನೇ ವರ್ಷದ ಸಂಭ್ರಮಾಚರಣೆ, `ಕನ್ನಡ ಕವನ’ ಕವನ ಸಂಕಲನದ ಲೋಕಾರ್ಪಣೆ, ಮಹಿಳೆಯಿಂದ ಕೋಲಾಟ, ಪ್ರತಿಭಾನ್ವಿತ ಮಕ್ಕಳ ಭರತನಾಟ್ಯ, ಕವಿಗೋಷ್ಠಿ, ಮಹಿಳೆಯ ತಂಡದಿAದ ಭಜನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯದ್ಭುತವಾಗಿ ವಿಜೃಂಭಣೆಯಿAದ ನಡೆಯಿಂತು ಎಂದು ಸಮಾರಂಭದ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಡಾ|| ಜೆ.ಪಿ.ಕೃಷ್ಣೇಗೌಡ ತಮ್ಮ ಅಂತರಾಳದ ಮಾತು ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್, ಕವಿತಾ ಗೋಪಾಲ್‌ರವರ “ಕನ್ನಡಿ’ ಕವನ ಸಂಕಮಲನ ಲೋಕಾರ್ಪಣೆ ಮಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳಾದ ಬಿ.ಆರ್.ಜಗದೀಶ್, ಸಮಾಜ ಸೇವಕರಾದ ಪಲ್ಲವಿ ಸಿ.ಟಿ.ರವಿ, ರಾಜ್ಯ ಮಹಿಳಾ ಸಮಾಜದ ಉಪಾಧ್ಯಕ್ಷರಾದ ರೇಖಾ ಹುಲಿಯಪ್ಪಗೌಡ, ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.

