ಬಿಎಂಎಸ್ ಕಾಲೇಜ್ ಆಪ್ ಇಂಜನಿಯರಿಂಗ್ ವತಿಯಿಂದ ಯುವಕ ಸಂಘದ ಕ್ಯಾಂಪಸ್–2 ಕಮ್ಯೂನಿಟಿ ಯೋಜನೆಯಡಿಯಲ್ಲಿ ವಿಜ್ಞಾನ ಮಾದರಿಗಳ ಅಂತಿಮ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಕಾಲೇಜು ಆವರಣದಲ್ಲಿ ಆಯೋಜಿಸಲಾಯಿತು.
ಕಳೆದ 8 ತಿಂಗಳುಗಳಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪರಿಸರ, ವಿಜ್ಞಾನ, ಜೀವನ ಕೌಶಲ್ಯ ಹಾಗೂ ಮಾನಸಿಕ ಸಮಾಲೋಚನೆ ವಿಷಯಗಳಲ್ಲಿ ತರಬೇತಿ ನೀಡಲಾಗಿದ್ದು, ಆಯ್ಕೆಯಾದ ಪ್ರಾಜೆಕ್ಟ್‌ಗಳನ್ನು ಈ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಪ್ರತಾಪ್ ಲಿಂಗಯ್ಯ, ಎನ್.ಎಸ್.ಎಸ್.ರಾಜ್ಯ ಅಧಿಕಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಭೀಮಶಾ ಆರ್ಯ ಪ್ರಾಂಶುಪಾಲರು, ಡಾ. ಎಲ್. ರವಿಕುಮಾರ್ ಉಪ ಪ್ರಾಂಶುಪಾಲರು, , ಡಾ. ಶೇಷಾಚಲಂ, ಉಪ ಪ್ರಾಂಶುಪಾಲರು ಡಾ. ಸುಜಾತಾ ಎನ್. ಯೋಜನಾ ಅಧಿಕಾರಿ ಹಾಗೂ ಯುವಕ ಸಂಘದ ಸಂಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

14 ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, 60ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವ ಗಮನಸೆಳೆಯಿತು.
ಬಿಎಂಎಸ್ ಕಾಲೇಜ್ ಆಫ್ ಇಂಜನಿಯರಿಂಗ್ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಬರವಣಿಗೆ ಪ್ಯಾಡ್‌ಗಳನ್ನು ವಿತರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಯಿತು.
ಒಟ್ಟಾರೆ, ಈ ವಿಜ್ಞಾನ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ನವೀನತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವಹಿಸಿತು.


