ಮಂದಾರ್ತಿ : ಯಕ್ಷಗಾನ ಕಲಾರಂಗದ 87ನೇ ಮನೆ ಹಸ್ತಾಂತರ

0
22

ಬ್ರಹ್ಮಾವರ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಂಕಿತಾಳ ಬಡ ಕುಟುಂಬಕ್ಕೆ ಬ್ರಹ್ಮಾವರ ತಾಲೂಕಿನ ನಾಲ್ಕೂರಿನಲ್ಲಿ ಮಂದಾರ್ತಿಯ ನಿವೃತ್ತ ಉಪನ್ಯಾಸಕ ಸೂರ್ಯನಾರಾಯಣ ಅಡಿಗ ಮತ್ತು ಗಿರಿಜಾ ಸೂರ್ಯನಾರಾಯಣ ಅಡಿಗ ದಂಪತಿ ವೈವಾಹಿಕ ಸುವರ್ಣ ವರ್ಷಾಚರಣೆಯ ನೆನಪಿನಲ್ಲಿ ನಿರ್ಮಿಸಿ ಕೊಟ್ಟ ನೂತನ ಮನೆ ‘ಶ್ರೀದೇವಿ ಕೃಪಾ’ದ ಹಸ್ತಾಂತರ ನಡೆಯಿತು.

ಮನೆಯನ್ನು ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ಸೂರ್ಯನಾರಾಯಣ ದಂಪತಿಗಳು ಸುಮಾರು 6.5 ಲಕ್ಷ ರೂ.ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಿದ್ದಾರೆ.

ಯಕ್ಷಗಾನ ಕಲಾರಂಗ ಯಾವ ಆಡಂಬರವಿಲ್ಲದೆ ಪ್ರಾಮಾಣಿಕತೆ ಮತ್ತು ನಿರಂತರ ಸಮಾಜ ಮುಖಿ ಕಾರ್ಯಕ್ರಮ ಗಳ ಮೂಲಕ ಸಮಾಜದ ಪ್ರೀತಿ ವಿಶ್ವಾಸ ಗಳಿಸಿದೆ ಎಂದು ಧನಂಜಯ ಶೆಟ್ಟಿ ನುಡಿದರು. ಮನೆಯ ಪ್ರಾಯೋಜಕ ಸೂರ್ಯನಾರಾಯಣ ಅಡಿಗ ಮಾತನಾಡಿ, ಇದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ. ಇಂತಹ ಒಂದು ಅವಕಾಶ ಕಲ್ಪಿಸಿದ ಯಕ್ಷಗಾನ ಕಲಾರಂಗಕ್ಕೆ ಕೃತಜ್ಞನಾಗಿದ್ದೇನೆ ಎಂದರು.

ನೇತಾಜಿ ಸೇವಾ ವೇದಿಕೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಪ್ರತಾಪ್ ಹೆಗ್ಡೆ ಮಾರಾಳಿ, ಶೇಡಿಕೊಡ್ಲು ವಿಠಲ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಶೋಭಾ ಕೆ. ಪೂಜಾರಿ, ಅಶೋಕ್ ಭಟ್, ಅಡಿಗರ ಪುತ್ರಿ ವಾಣಿ ವಿ. ಹೇರ್ಳೆ ಅತಿಥಿಗಳಾಗಿ ಆಗಮಿಸಿದ್ದರು.

ನಾಲ್ಕೂರು ಶಾಲೆಯ ಮುಖ್ಯೋಪಾದ್ಯಾಯ ಕೃಷ್ಣ ನಾಯ್ಕ್, ಯಕ್ಷಗುರು ಮಹೇಶ್ ಮಂದಾರ್ತಿ, ಕೆ.ಅಣ್ಣಾಜಿ ರಾವ್, ರಾಜು ಕುಲಾಲ್ ಮುಂತಾದ ವರು ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗ ಸಂಸ್ಥೆಯ ಪದಾಧಿಕಾರಿಗಳಾದ ಪ್ರೊ. ಕೆ. ಸದಾಶಿವ ರಾವ್, ವಿದ್ಯಾಪ್ರಸಾದ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಎಚ್. ಸುಜಯೀಂದ್ರ ಹಂದೆ, ಗಣೇಶ ಬ್ರಹ್ಮಾವರ, ಸುದರ್ಶನ ಬಾಯರಿ, ಸುಜಯ್ ಶೆಟ್ಟಿ, ಕೆ.ಯೋಗೀಶ್ ಪೈ ಭಾಗವಹಿಸಿದ್ದರು.

ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here