ಆತ್ಮೀಯರೆ, ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ವಿಶ್ವ ರೆಡಿಯೊ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ಫೆಬ್ರವರಿ 13 ರಂದು ಶುಕ್ರವಾರ ಸಂಜೆ 6.10 ರ ಸಮಯಕ್ಕೆ ಪ್ರಸಾರವಾಗಲಿದೆ.
ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು ರೇಡಿಯೊದೊಂದಿಗಿರುವ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಇದು *ಫಬ್ರವರಿ 14 ಶನಿವಾರ ಮಧ್ಯಾಹ್ನ 2.10 ಕ್ಕೆ ಮರುಪ್ರಸಾರವಾಗಲಿದೆ. ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

