“ವ್ಯಕ್ತಿತ್ವ ನಿರ್ಮಾಣವೇ ನಿಜವಾದ ನಾಯಕತ್ವದ ಮೂಲ” – ಜಿ. ಎಲ್. ತ್ರಿಪುರಾಂತಕ
ಮಂಗಳೂರು ವಿಶ್ವವಿದ್ಯಾನಿಲಯಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ವತಿಯಿಂದ, ವಿದ್ಯಾರ್ಥಿ ಪರಿಷತ್, ವಿಶ್ವವಿದ್ಯಾನಿಲಯಕಾಲೇಜು, ಮಂಗಳೂರು ಅವರ ಸಹಯೋಗದೊಂದಿಗೆ ಆಯೋಜಿಸಲಾದ 52ನೇ ವಿವೇಕ ವಾಣಿ ಸರಣಿಉಪನ್ಯಾಸ ಕಾರ್ಯಕ್ರಮವು 12-02-2026 ರಂದು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ನಲ್ಲಿ ಯಶಸ್ವಿಯಾಗಿ ನೆರವೇರಿತು. “ವ್ಯಕ್ತಿತ್ವದಿಂದ ನಾಯಕತ್ವದತ್ತ–ವಿವೇಕಾನಂದರಪಥ” ಎಂಬಸಮಕಾಲೀನವಿಷಯವು ವಿದ್ಯಾರ್ಥಿಗಳಲ್ಲಿ ವಿಶೇಷ ಸ್ಪಂದನ ಮೂಡಿಸಿತು.

ಕಾರ್ಯಕ್ರಮವನ್ನು ದೀಪಪ್ರಜ್ವಲನದ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟನಾ ಭಾಷಣ ಮಾಡಿದ ಸ್ವಾಮಿಯುಗೇಶಾನಂದಜಿ, ನಿರ್ವಾಹಕರು, ರಾಮಕೃಷ್ಣ ಮಿಷನ್ ಬಾಲಕಾಶ್ರಮ, ಮಂಗಳೂರು ಅವರು ಸ್ವಾಮಿ ವಿವೇಕಾನಂದರ ಜೀವನವು ಯುವಜನತೆಗೆ ಶಾಶ್ವತ ಪ್ರೇರಣೆಯಾಗಿದೆ. ವ್ಯಕ್ತಿತ್ವ ವಿಕಾಸದ ಮೂಲಕವೇ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆತರಲು ಸಾಧ್ಯವೆಂದುಅವರು ತಿಳಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿ. ಎಲ್. ತ್ರಿಪುರಾಂತಕ, ಸಂಯೋಜಕರು, ಜೆ.ಎಸ್.ಎಸ್‌ಶಿಕ್ಷಣ ಸಂಸ್ಥೆಗಳು, ಸುತ್ತೂರುಅವರು“ವ್ಯಕ್ತಿತ್ವದಿಂದ ನಾಯಕತ್ವದತ್ತ–ವಿವೇಕಾನಂದರಪಥ” ಎಂಬ ವಿಷಯದ ಕುರಿತು ವಿಶ್ಲೇಷಣಾತ್ಮಕ ಉಪನ್ಯಾಸ ನೀಡಿದರು. ವ್ಯಕ್ತಿತ್ವ ನಿರ್ಮಾಣವು ಆತ್ಮಶ್ರದ್ಧೆ, ಆತ್ಮವಿಶ್ವಾಸ, ಶಿಸ್ತು ಮತ್ತು ಮೌಲ್ಯಾಧಾರಿತ ಜೀವನಶೈಲಿಯಿಂದ ಆರಂಭವಾಗುತ್ತದೆ ಎಂದರು. ನಾಯಕತ್ವವು ಹುದ್ದೆಯಿಂದ ಬರುವುದಲ್ಲ; ಅದು ಒಳಗಿನ ಪ್ರಾಮಾಣಿಕತೆ, ಸೇವಾಭಾವ ಮತ್ತುದೃಢಸಂಕಲ್ಪದಿಂದ ರೂಪುಗೊಳ್ಳುತ್ತದೆ.
ಸ್ವಾಮಿ ವಿವೇಕಾನಂದರುಯುವಕರಲ್ಲಿಅಡಗಿರುವಅಪಾರ ಶಕ್ತಿಯನ್ನುಜಾಗೃತಗೊಳಿಸುವ ಸಂದೇಶನೀಡಿದ್ದು, ಆ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ನಾಯಕತ್ವ ಬೆಳೆಯುತ್ತದೆ ಎಂದು ವಿವರಿಸಿದರು. ಶಿಕ್ಷಣವು ಉದ್ಯೋಗಕೇಂದ್ರಿತವಾಗಿರದೆ ವ್ಯಕ್ತಿತ್ವ ಮತ್ತುಜವಾಬ್ದಾರಿಯುತ ನಾಗರಿಕತ್ವ ನಿರ್ಮಾಣದತ್ತ ಮುಖ ಮಾಡಬೇಕುಎಂದುಅವರು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಸ್ವಾಮಿಯುಗೇಶಾನಂದಜಿ ಹಾಗೂ ಜಿ. ಎಲ್. ತ್ರಿಪುರಾಂತಕಮತ್ತುಪ್ರೊ. ಪಿ. ಎಲ್. ಧರ್ಮಅವರನ್ನುಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಡಾ. ಮಹದೇಶ ಕೆ. ಸಿ., ಸಿಂಡಿಕೇಟ್ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯ ಅವರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಜೀವನದಲ್ಲಿ ಒಂದು ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು. ಪ್ರೊ. ಗಣಪತಿಗೌಡಎಸ್., ಪ್ರಾಂಶುಪಾಲರು, ವಿಶ್ವವಿದ್ಯಾನಿಲಯಕಾಲೇಜು, ಮಂಗಳೂರು ಅವರುಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಪಿ. ಎಲ್. ಧರ್ಮ, ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ ಅವರು ಅಧ್ಯಕ್ಷೀಯ ಭಾಷಣದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ರಾಷ್ಟ್ರ ನಿರ್ಮಾಣಕ್ಕೆ ದಾರಿದೀಪವಾಗಿವೆ. ಯುವಜನತೆ ಶ್ರದ್ಧೆ, ಶಕ್ತಿ ಮತ್ತು ಸೇವಾ ಮನೋಭಾವದಿಂದ ಮುಂದುವರಿದರೆ ದೇಶದ ಭವಿಷ್ಯಉಜ್ವಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಚಂದ್ರು ಹೆಗ್ಡೆ, ಸಂಯೋಜಕರು, ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ ಅವರು ಸ್ವಾಗತಿಸಿ ಕಾರ್ಯಕ್ರಮದ ಪರಿಚಯ ನೀಡಿದರು. ಪ್ರೊ. ಜಯವಂತ ನಾಯಕ್, ಉಪ ನಿರ್ದೇಶಕರು, ವಿದ್ಯಾರ್ಥಿಪರಿಷತ್, ವಿಶ್ವವಿದ್ಯಾನಿಲಯಕಾಲೇಜು, ಮಂಗಳೂರು ಅವರು ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕು. ಪರಮೇಶ್ವರಿ ನಿರೂಪಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

