ಬೀದರ್ : ಮನೆಯ ಮುಂದಿನ ಚರಂಡಿಗೆ ಬಿದ್ದು 5 ವರ್ಷದ ಮಗು ಮೃತ್ಯು

0
51

ಮನೆಯ ಮುಂದೆ ಇರುವ ಚರಂಡಿಗೆ ಬಿದ್ದು ಐದು ವರ್ಷದ ಮಗು ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಮಲ್ಲಿಪರ್ಜಾಪುರ ಎಂಬಲ್ಲಿ ನಡೆದಿದೆ. ಶಿವರಾತ್ರಿ ಹಬ್ಬಕ್ಕೆ ಅಜ್ಜಿ ಮನೆಗೆ ಬಂದಿದ್ದಾಗ ಈ ಒಂದು ಘಟನೆ ನಡೆದಿದೆ.

ಮನೆ ಮುಂದೆ ಆಟವಾಡುತ್ತಿರುವಾಗ ಅಲ್ಲಿಯೇ ಇದ್ದ ಚರಂಡಿಗೆ ಆಯತಪ್ಪಿ ಬಿದ್ದಿದ್ದಾನೆ. ಗುಂಡಿ ತುಂಬಾ ಆಳವಿದ್ದು ನೀರು ತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ಹೊರಬರಲಾಗದೆ ಅಲ್ಲಿಯೇ ಉಸಿರುಗುಟ್ಟಿ ಸಾವನಪ್ಪಿದ್ದಾನೆ.

ಗ್ರಾಮ ಪಂಚಾಯಿತಿ ಗುಂಡಿ ಮುಚ್ಚದೆ ಇರುವುದರಿಂದ ಮಗುವಿಗೆ ಸಾವಿಗೆ ಕಾರಣ. ಪಿಡಿಒ ವಿರುದ್ಧ ಕ್ರಮ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here