ಪಡುಕುಡೂರು : ಗೋವು ಕಲ್ಲು ಮತ್ತು ಪ್ರಾಣಿ ಪಕ್ಷಿಗಳ ಬಾಯಾರಿಕೆ ನಿವಾರಣಾ ಕೇಂದ್ರ ಉದ್ಘಾಟನೆ

0
15

ಮನೆಮನದಲ್ಲಿ ದೇವರಿದ್ದಾಗ ಮಾತ್ರ ಸೇವೆ ಮಾಡಲು ಸಾಧ್ಯ : ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು.

ಪಡುಕುಡೂರು : ಮನೆ ಮನದಲ್ಲಿ ದೇವರು ಇದ್ದಾಗ ಮಾತೃ ನಮಗೆ ಜನರ ಸೇವೆ ಮಾಡುವ ಮನಸ್ಸು ಬರುತ್ತದೆ, ಹಿರಿಯರ ಸ್ಮರಣೆ ಇರುತ್ತದೆ. ಹಲವು ಕಡೆಗಳಲ್ಲಿ ಮನೆಗಳಲ್ಲಿ ದೇವರು ಇರುವುದಿಲ್ಲ. ಪಡುಪರ್ಕಳದ ಹರೀಶ ಶೆಟ್ಟಿಯವರ ಮನೆ ಮನದಲ್ಲಿ ದೇವರು ಇದ್ದಾರೆ ಎಂಬುದಕ್ಕೆ ಅವರ ಮನೆ ಮತ್ತು ಜನಸೇವೆಯ ಮನಸಾಕ್ಷಿಯೇ ಪ್ರಮುಖ ಕಾರಣವಾಗಿದೆ ಎಂದು ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಕಾಣಿಯೂರು ಮಠಾದೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಇತ್ತೀಚೆಗೆ ಪಡುಕುಡೂರು ಪಡುಪರ್ಕಳದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಮುಂಬೈ ಉದ್ಯಮಿ ಪಡುಪರ್ಕಳ ಹರೀಶ ಶೆಟ್ಟಿಯವರ ತಂದೆ ಕುರ್ಪಾಡಿ ಸಂಜೀವ ಶೆಟ್ಟಿಯವರ ಸ್ಮರಣಾರ್ಥ ಗೋವು ಕಲ್ಲು ಮತ್ತು ಪ್ರಾಣಿ ಪಕ್ಷಿಗಳ ಬಾಯಾರಿಕೆ ನಿವಾರಣಾ ಕೇಂದ್ರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಪಡುಪರ್ಕಳದ ಹರೀಶ ಶೆಟ್ಟಿ ಮತ್ತು ತಾಯಿ ಸುನಂದ ಶೆಟ್ಟಿ ಹಾಗೂ ಪಡುಪರ್ಕಳ ಕುಟುಂಬಸ್ಥರು ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಪಡುಪರ್ಕಳ ಶಂಕರ ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್‌, ಜಗದೀಶ ಹೆಗ್ಡೆ ಪಡುಕುಡೂರು, ಅಶೋಕ ಎಂ.ಶೆಟ್ಟಿ, ಪ್ರಸನ್ನ ಶೆಟ್ಟಿ ಪಡುಕುಡೂರು, ಸುರೇಶ ಶೆಟ್ಟಿ ಶಿವಪುರ ಸೇರಿದಂತೆ ಪ್ರಮುಖರು, ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು, ಪಡುಪರ್ಕಳ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here