ಪ್ರಗತಿಬಂಧು- ಸ್ವ ಸಹಾಯ ಸಂಘಗಳಿಗೆ ನೂತನ 700 ಸದಸ್ಯರ ಸೇರ್ಪಡೆ ಕಾರ್ಯಕ್ರಮ

0
6

ಕಾರ್ಕಳ -ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಕಾರ್ಕಳ ತಾಲೂಕಿನ ಯೋಜನಾ ಕಛೇರಿಯ ಸಭಾಂಗಣದಲ್ಲಿ ನೂತನ ನಡೆದ ಆರ್ಥಿಕ ವರ್ಷದಲ್ಲಿ ಪ್ರಗತಿ ಬಂಧು _ ಸ್ವಸಹಾಯ ಸಂಘಗಳಿಗೆ ನೂತನ 700 ಮಂದಿ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಮತ್ತು ತಾಲೂಕಿನ ಒಕ್ಕೂಟಗಳ ಅಧ್ಯಕ್ಷರ ಸಭೆಯನ್ನು ಹಮ್ಮಿಕೊಂಡಿದ್ದು, ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಆನಂದ ಸುವರ್ಣರವರು, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾಂಕೇತಿಕವಾಗಿ ನೂತನ 10 ಮಂದಿ ಸದಸ್ಯರಿಗೆ ಕುಟುಂಬ ಕೈಪಿಡಿಯೊಂದಿಗೆ _ಗುಲಾಬಿ ಹೂವು ನೀಡಿ,ಒಕ್ಕೂಟಕ್ಕೆ ಸ್ವಾಗತಿಸಿ ಅಭಿನಂದಿಸಿದರು.

ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಮಾನ್ಯರು ಯೋಜನೆ ಬೆಳೆದು ಬಂದ ದಾರಿ, ಪೂಜ್ಯರು & ಅಮ್ಮನವರು ಯೋಜನೆಯನ್ನು ವಿವಿಧ ಹಂತದಲ್ಲಿ ಬೆಳೆಸಿ ಮುನ್ನಡೆಸಿದ ರೀತಿಯನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದರು.ಕಾರ್ಕಳ ತಾಲೂಕಿನಲ್ಲಿ ಕಳೆದ 30 ವರುಷಗಳ ಹಿಂದೆ, ಯೋಜನೆ ಆರಂಭ ಮಾಡಿದ ಸಂದರ್ಭದಲ್ಲಿ ಇದ್ದ ಪರಿಸ್ಥಿತಿ ಮತ್ತು ಇವತ್ತಿನ ಬೆಳವಣಿಗೆಗಳ ಬಗ್ಗೆ ಅತ್ಯಂತ ಮಾರ್ಮಿಕವಾಗಿ ತಿಳಿಸಿದರು.ರಾಜ್ಯ ವ್ಯಾಪಿ ಯೋಜನೆಯ ವತಿಯಿಂದ ಹಮ್ಮಿಕೊಂಡ ವಿವಿಧ ಸಮುದಾಯಭಿವೃದ್ಧಿ ಕಾರ್ಯಕ್ರಮಗಳಾದ 930 ಕೆರೆ ಅಭಿವೃದ್ಧಿ, 540 ಶುದ್ಧಗಂಗಾ ಘಟಕ ರಚನೆ, 35000 ವಿಕಲಚೇತನರಿಗೆ ಸಲಕರಣೆ ಒದಗಣೆ, ಪ್ರತಿವರ್ಷ ಸರ್ಕಾರಿ ಶಾಲೆಗಳಿಗೆ 1000 ಶಿಕ್ಷಕರ ಒದಗಣೆ, 60,000 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ,5000 ಹಾಲಿನ ಡೈರಿಗೆ ಅನುದಾನ,22000 ನಿರ್ಗತಿಕರಿಗೆ ಮಾಶಾಸನ ವಿತರಣೆ, 660 ಅನಾಥರಿಗೆ ವಾತ್ಸಲ್ಯ ಮನೆ ರಚನೆ,100 ಅನಾಥಾಶ್ರಮಕ್ಕೆ ಸಹಾಯ,17000 ದೇವಸ್ಥಾನಕ್ಕೆ ಧನ ಸಹಾಯ,784 ರುದ್ರ ಭೂಮಿಗೆ ಸಿಲಿಕಾನ್ ಒದಗಣೆ ಹೀಗೆ ಹಲವಾರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಅಂಕಿ ಅಂಶಗಳ ಸಹಿತ ಬೆಳಕು ಚೆಲ್ಲಿ ವಿವಿಧ ಹಂತದಲ್ಲಿ ಒಕ್ಕೂಟದ ಪದಾಧಿಕಾರಿಗಳ ನಿರಂತರ ಸೇವೆಯನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಿಲ್ಲಾ ನಿರ್ದೇಶಕರಾದ ಶ್ರೀ ನಾಗರಾಜ್ ಶೆಟ್ಟಿರವರು, ಸಂಪೂರ್ಣ ಸುರಕ್ಷಾ ನೋಂದಣಿ ಮತ್ತು ಹಿಡುವಳಿ/ವಾರ್ಷಿಕ ಯೋಜನೆಯನ್ನು ಸದಸ್ಯವಾರು ಅನುಷ್ಠಾನ ಮಾಡುವ ಬಗ್ಗೆ, ಪ್ರಸ್ತುತ. ಬ್ಯಾಂಕಿನ ನಿಯಮಾವಳಿ ,ಸಂಘದ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಂಘಗಳಿಗೆ ಸದಸ್ಯರ ಸೇರ್ಪಡೆಯ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಮಂಜುನಾಥ್ ಬೈಲೂರು ವಹಿಸಿದ್ದು, ತಾಲೂಕಿನ ಎಲ್ಲಾ ಒಕ್ಕೂಟಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ, ಒಕ್ಕೂಟ ಪದಾಧಿಕಾರಿಗಳು ಕ್ಷೇತ್ರದ ಕೊಂಡಿಯಾಗಿ ಒಟ್ಟಾಗಿ ಯೋಜನೆಯ ಸೇವೆಯನ್ನು ಮಾಡೋಣ, ಯೋಜನೆಯ ಮೂಲಕ ಪೂಜ್ಯರು ಮಾಡುತ್ತಿರುವ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಇನ್ನಷ್ಟು ಉಜ್ವಲವಾಗಿ ಬೆಳಗಲಿ ಎಂದು ಶುಭಹಾರೈಸಿದರು. ವೇದಿಕೆಯಲ್ಲಿ, ಯೋಜನೆಯ ಹಿತೈಷಿ, ಜಿಲ್ಲಾ ಜನಜಾಗೃತಿ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ಕಮಲಾಕ್ಷ ನಾಯಕ್ , ವಲಯ ಅಧ್ಯಕ್ಷರುಗಳಾದ ಶ್ರೀ ಸದಾನಂದ ಆಚಾರ್ಯ, ಶ್ರೀ ನೋಣು, ಶ್ರೀ ಜಯ, ಶ್ರೀ ಅಶ್ವಥ್ ನಾರಾಯಣ್, ಶ್ರೀ ವಿದ್ಯಾನಂದ,ಶ್ರೀ ಪ್ರವೀಣ್ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 58 ಒಕ್ಕೂಟಗಳ ಅಧ್ಯಕ್ಷರುಗಳು, ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಭಾಗವಹಿಸಿದರು. ತಾಲೂಕಿನ ಯೋಜನಾಧಿಕಾರಿ ಶ್ರೀ ಬಾಲಕೃಷ್ಣ ಹಿರಿಂಜ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು ಸ್ವಾಗತಿಸಿ, ಮೇಲ್ವಿಚಾರಕರಾದ ಶ್ರೀ ದಿನೇಶ್ ಹೆಗ್ಡೆ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರದ ನಿರೂಪಣೆಯನ್ನು ಮೇಲ್ವಿಚಾರಕರಾದ ಯಶೋದ ರವರು ನೆರವೇರಿಸಿದರು.

LEAVE A REPLY

Please enter your comment!
Please enter your name here