ಪೆರ್ನಾಜೆಗೆ ಮತ್ತೆ ಪುನಃ ಪುನಃ ಬಂದ ಗಜರಾಜ

0
16

ಪೆರ್ನಾಜೆ: ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ಪೆ .17 ರಂದು ಮುಂಜಾನೆ 3.30 ಸಮಯ 10ಕ್ಕೂ ಮಿಕ್ಕಿ ಬಾಳೆ ಗಿಡ 3 ಅಡಿಕೆ ಗಿಡಗಳು ದ್ವಂಸ ಗುಡ್ಡಡ್ಕ ಆನೆಗುಂಡಿ ಕಡೆ ಬಂದಿರುವ ಆನೆ ರಸ್ತೆಯಲ್ಲಿ ಹಿಂತಿರುಗಿದೆ. ಎಲ್ಲೆ ಹೋದರೂ ಮತ್ತೆ ಪೆರ್ನಾಜೆಗೆ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ. ಯಾವ ಸೋಲಾರ್ ಬೇಲಿಯೂ ಅಳವಡಿಸಿದ್ದರು ನಿಷ್ಪ್ರಯೋಜಕವಾಗಿದೆ ಇದನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರ ಪರಿಹಾರ ಇಲ್ಲವಾದಲ್ಲಿ ಮತ್ತೆ ಮತ್ತೆ ರೈತರ ತೋಟಕ್ಕೆ ಆನೆ ದಾಳಿ ನೀಡುತ್ತಾ ಇರುತ್ತದೆ.

ಹೀಗೆ ಆದರೆ ಮುಂದೆ ಪ್ರಾಣಾಪಾಯಕ್ಕೂ ಸಂಚಕಾರ ಬರಬಹುದು. ಗ್ರಾಮಸ್ಥರು ಕೃಷಿಕರು ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳದೆ ಇದ್ರೆ ಗ್ರಾಮಸ್ತರು ರೊಚ್ಚಿಗೇಳುವ ಪರಿಸ್ಥಿತಿ ಉಂಟಾಗುತ್ತದೆ. ಕಳೆದ ಮೂರು ವರ್ಷಗಳಿಂದ ಸತತ ಹಲವಾರು ಬಾರಿ ಆನೆ ರಂಪಾಟ ಜೋರಾಗಿದ್ದು ಯಾವುದೇ ಪರಿಹಾರ ಸಿಗಲಿಲ್ಲ ಶಾಸಕರು ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕಾಗಿದೆ ಎಂದು ಊರವರು ಕೃಷಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here