ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಶಿವರಾತ್ರಿ ಮಹೋತ್ಸವ : ಮಹಾಅನ್ನಸಂತರ್ಪಣೆ

0
7

ಉಡುಪಿ : ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಾಶಿವರಾತ್ರಿ ಹಾಗೂ ರಥೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.ರವಿವಾರ ಬೆಳಗ್ಗೆ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ, ಸಂಜೆ ನಂದಿಕೋಣ, ರಕ್ತೇಶ್ವರಿ, ಬೊಬ್ಬರ್ಯ ದೈವಗಳಿಗೆ ವಾರ್ಷಿಕ ಪೂಜೆ ನಡೆಯಿತು. ರಾತ್ರಿ ಉತ್ಸವ ಬಲಿ, ರಥೋತ್ಸವ ನಡೆದು ಮಹಾರಂಗಪೂಜೆಯಾಗಿ ಭೂತಬಲಿ, ನಂದಿಕೋಣ, ರಕ್ತೇಶ್ವರಿ, ಬೊಬ್ಬರ್ಯ ದೈವಗಳಿಗೆ ಪೂಜೆ ಹಾಗೂ ಕ್ಷೇತ್ರಪಾಲ ಪೂಜೆ ಜರಗಿತು. ಸೋಮವಾರದಂದು ಬೆಳಗ್ಗೆ ತುಲಾಭಾರ ಸೇವೆಯಾಗಿ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಸುಮಾರು 6500 ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌, ತಾಲೂಕು ಗ್ಯಾರಂಟಿ ಅನುಷ್ಠಾನ ಯೋಜನೆ ಸಮಿತಿಯ ಅಧ್ಯಕ್ಷ ರಮೇಶ್‌ ಕಾಂಚನ್‌, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ, ದೇವಸ್ಥಾನದ ಪ್ರಧಾನ ತಂತ್ರಿ ಪಿ. ಶಶಿಕಾಂತ್‌ ತಂತ್ರಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪಿ. ವಾಸುದೇವ ಉಪಾಧ್ಯ, ದಿನೇಶ್‌ ಪುತ್ರನ್‌, ಎಂ. ಪ್ರಭಾಕರ ಶೆಟ್ಟಿ, ಶೇಖರ್‌ ಶೆಟ್ಟಿಯು. ಸುದೇಶ್‌ ಶೇಟ್‌, ರಾಜೇಶ್‌ ಬಿ., ವಿದ್ಯಾಲತಾ ಯು. ಶೆಟ್ಟಿ, ಶಮಿತಾ ಎಸ್‌. ಭಂಡಾರಿ, ಹರೀಶ್ ರಾಮ್  , ರವಿ ಭಟ್ , ಹಾಗೂ ಊರ  ಪರವೂರ  ನೂರಾರು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here