ಪುತ್ತೂರು : ದಿನಾಂಕ: 17-02-2026 ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾಗಿ ರಾಕೇಶ್ ಪೊಳಲಿ ಇವರು ಆಯ್ಕೆಯಾಗಿದ್ದಾರೆ.
ಆಮಂತ್ರಣ ಪರಿವಾರವು ದಕ್ಷಿಣ ಕನ್ನಡ,ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ವೇದಿಕೆಗಳನ್ನು ಹೊಂದಿದ್ದು ಆಯಾ ಜಿಲ್ಲೆಗೆ ಸಾಂಸ್ಕೃತಿಕ, ಸಾಹಿತ್ಯ ಮತ್ತು ಸಂಘಟನೆಯ ದೃಷ್ಟಿಯಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತಿದೆ.
ಅಂತೆಯೇ ದ.ಕ ಜಿಲ್ಲಾ ಪದಗ್ರಹಣ ಮತ್ತು ಬಂಟ್ವಾಳ ತಾಲೂಕಿನ ವರ್ಷದ ಹರ್ಷ ಕಾರ್ಯಕ್ರಮವು ಮಾ.1 ರಂದು ಬಂಟ್ವಾಳದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾಗಿ ಸಕ್ರೀಯ ಸದಸ್ಯ ರಾಕೇಶ್ ಪೊಳಲಿ ಇವರು ಪದಸ್ವೀಕಾರ ಮಾಡಲಿದ್ದಾರೆ.
ಈ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಪ್ರತಿನಿಧಿಗಳಾದ ಹೆಚ್.ಕೆ.ನಯನಾಡು,ಆಶಾ ಅಡೂರು, ಉಮಾ ಹಾಸನ,ಭಾರತಿ ಪರ್ಕಳ ಮತ್ತು ದ.ಕ ಜಿಲ್ಲಾಧ್ಯಕ್ಷೆ ವಿಂಧ್ಯಾ ಎಸ್.ರೈ , ಉಪಾಧ್ಯಕ್ಷೆ ಅನಿತಾ ಶೆಟ್ಟಿ ಸಹಕರಿಸಿದ್ದಾರೆ ಎಂದು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ತಿಳಿಸಿದ್ದಾರೆ.

