ಬೆಳ್ವೆ : 53 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

0
11

ಟೀಮ್ ಮಲೆನಾಡು ಹ್ಯೂಮೇನಿಟರಿಯನ್ ಟ್ರಸ್ಟ್ (ರಿ ) ಬೆಳ್ವೆ ಇದರ ಆಶ್ರಯದಲ್ಲಿ ಹೆಬ್ರಿ ಹಾಲಾಡಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದ ಆಧಾರ ರಹಿತ 53 ಕುಟುಂಬಗಳಿಗೆ ರಂಝಾನ್ ತಿಂಗಳ ಪ್ರಯುಕ್ತ ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಹಾಲ್ ನಲ್ಲಿ ನೆಡೆಯುವ ” ರಂಝಾನ್ ಕಿಟ್ ” 2026 ವಿತರಣ ಕಾರ್ಯಕ್ರಮ ಇತ್ತೀಚಿಗೆ ಬೆಳ್ವೆ ಶ್ರೀ ಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವ ಯಾಹ್ಯ ಮಲ್ಪೆ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಟೀಮ್ ಮಲೆನಾಡು ಹ್ಯೂಮೇನಿಟರಿಯನ್ ಟ್ರಸ್ಟ್ (ರಿ ) ಬೆಳ್ವೆ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜುಮ್ಮಾ ಮಸೀದಿ ಬೆಳ್ವೆ ಖತೀಬ್ ಮೌಲಾನಾ ಮೊಹಮ್ಮದ್ ರಫೀಕ್ ಕಿರಾತ್ ಪಠಿಸಿ ದುವಾ ಗೈದು ಮಾತನಾಡಿದರು.

ಜಾಮಿಯಾ ಉಲ್ ಉಲೇಮಾ ಉಡುಪಿ ಜಿಲ್ಲಾ ಅಧ್ಯಕ್ಷ ಹಾಗೂ ಟೀಮ್ ಮಲೆನಾಡು ಹ್ಯೂ ಮೇನಿಟರಿಯನ್ ಟ್ರಸ್ಟ ಟ್ರಸ್ಟಿ ಮೌಲಾನಾ ಜಮೀರ್ ಅಹ್ಮದ್ ರಷಾದಿ ಪ್ರಸ್ತಾವಿಕವಾಗಿ , ಟ್ರಸ್ಟಿ ಪೀರು ಸಾಹೇಬ್ ,ಮಾತನಾಡಿದರು. ಸ್ಥಳೀಯದರ ಅಬ್ದುಲ್ ಖಾದರ್ ಅಲ್ಬಾಡಿ , ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟ ಸದಸ್ಯ ಹರೂನ್ ರಶೀದ್ , ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ, ಕೋಶಾಧಿಕಾರಿ ಮೊಹಮ್ಮದ್ ಆಸಿಫ್ ಅಲ್ಬಾಡಿ ವಿಶೇಷವಾಗಿ ಸಹಕರಿಸಿದರು.ಉಪಸ್ಥಿರಿದ್ದರು. ಟ್ರಸ್ಟಿ ಮೊಹಮ್ಮದ್ ರೇಯನ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಅರಾಫತ್ ಅಲ್ಬಾಡಿ ಸ್ವಾಗತಿಸಿದರು.ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು ವಂದಿಸಿದರು.ಟ್ರಸ್ಟಿ ಅನ್ವರ್ ಕoಡ್ಲೂರ್, ಸರ್ಫರಾಜ್ ಕುವೈಟ್,ಆಸೀರ್ ಬೆಂಗಳೂರು, ಇಲ್ಯಾಸ್ ಬೆಳ್ವೆ , ನಝೀರ್ ಶಾ, ಅಬ್ದುಲ್ ಸಮಿ ಬೈಂದೂರು , ಅನ್ಸಾರ್ ಹೊಸಂಗಡಿ,ಅಲ್ತಾಫ್ ಫಾಲ್ಕನ್ ಲಾಜಿಸ್ಟಿಕ್ಸ್ ಬೆಂಗಳೂರು, ಇಸ್ಮಾಯಿಲ್ ಸಾಹೇಬ್ ಶಿರೂರು, ಪರ್ವೇಜ್ ಅಲ್ಬಾಡಿ, ಶರೀಫ್ ಸಾಹೇಬ್ ಬೆಳ್ವೆ, ಶಾಕಿರ್,ಶಾಬಾಜ್,ಹನೀಫ್ ಬೆಳ್ವೆ , ಹನೀಫ್ ಟಿಕೆ ರೋಡ್ ದುಬೈ ,ಇರ್ಷಾದ್ ಅಲ್ಬಾಡಿ ,ನವಾಜ್ ಅಲ್ಬಾಡಿ, ಫಾಝಿಲ್ ಆದಿ ಉಡುಪಿ , ರಫೀಕ್ ಗಂಗೊಳ್ಳಿ, ಶಬ್ಬುದೀನ್ ಶಿವಮೊಗ್ಗ, ಶಬ್ಬೀರ್ ಸಾಹೇಬ್ ಬೆಳ್ವೆ, ಸೈಯದ್ , ಇರ್ಷಾದ್, ಸಾಧಿಕ್ ಅಲ್ಬಾಡಿ ವಿಶೇಷವಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here