ಕಾಸರಗೋಡು ಕನ್ನಡ ಗ್ರಾಮದಲ್ಲಿ ನಗರಸಭಾಧ್ಯಕ್ಷೆ ಶಾಹಿನಾ ಸಲೀಂಗೆ ಸನ್ಮಾನ- ಅಭಿನಂದನೆ

0
17


ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ನಗರಸಭೆಯ ಪ್ರಥಮ ವಾರ್ಡ್ ಸಭೆಗೆ ಆಗಮಿಸಿದ, ನೂತನವಾಗಿ ಚುನಾಯಿತರಾದ ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಆರೋಗ್ಯ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಮೆಹರುನ್ನೀಸಾ ಹಮೀದ್, 9 ನೇ ವಾರ್ಡ್ ಕೌನ್ಸಿಲರ್,ಶಾರದಾ ಬಿ ಅವರಿಗೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ), ಕಾಸರಗೋಡು ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು,ಕಾಸರಗೋಡು ಜಿಲ್ಲಾ (ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ ಇದರ ವತಿಯಿಂದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಗೌರವ ಫಲಕ, ಸ್ಮರಣೆಕೆ, ಶಾಲು, ಹಾರವನ್ನಿತ್ತು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಶಿವರಾಮ ಕಾಸರಗೋಡು ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಸರದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತಿರುವ ಕಾಸರಗೋಡು ಗೋ – ಕುಟೀರದ ಆವರಣದಲ್ಲಿ ಸಾವಯವ ಕೃಷಿ,ಗ್ರಾಮೀಣ ಸ್ವ ಉದ್ಯೋಗ ಕೇಂದ್ರ, ವಿದ್ಯಾರ್ಥಿಗಳು, ಯುವಜನರು ಮಹಿಳೆಯರಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ,ಡಿಸೈನಿಂಗ್, ಕಂಪ್ಯೂಟರ್ ಡಿಜಿಟಲ್ ಮಾಧ್ಯಮ ಕೇಂದ್ರ, ಗ್ರಂಥಾಲಯ,ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್,ಗೋ – ವಿಶ್ರಾಂತಿ ಗ್ರಹ ಮುಂತಾದ ವಿವಿಧ ಕಾರ್ಯ ಯೋಜನೆಗಳ ಕುರಿತು ಕಾಸರಗೋಡು ನಗರ ಸಭೆಯ ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸಭಾ ಕೌನ್ಸಿರ್ ಗಳಿಗೆ ಮಾಹಿತಿ ನೀಡಿದರು.
ಕಾಸರಗೋಡು ಗೋ-ಕುಟೀರಕ್ಕೆ ಕಾಸರಗೋಡು ನಗರಸಭೆಯ ವಿವಿಧ ಯೋಜನೆಗಳ ಮೂಲಕ ಅನುದಾನ ನೀಡುವ ಮೂಲಕ ಸಹಕರಿಸುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here