ಕಿನ್ನಿಗೋಳಿ; ಶ್ರೀ ಕೊಂಡೆಲ್ತಾಯ ದೈವಸ್ಥಾನ ಕೊಂಡೇಲ ಕಟೀಲು ಇಲ್ಲಿನ ಕೊಂಡೆಲ್ತಾಯ ರಕ್ತೇಶ್ವರೀ ಮತ್ತು ಪಂಜುರ್ಲಿ ದೈವಗಳ ವರ್ಷಾವದಿ ಚೌತಿ ಹಬ್ಬ ಮತ್ತು ನೇಮೋತ್ಸವ ಫೆ. 20 ಮತ್ತು 21 ರಂದು ನಡೆಯಲಿದೆ, ಫೆ 20 ರಂದು ಸಂಜೆ 4.00 ಗಂಟೆಗೆ ಕಲಶಾಭಿಷೇಕ ಮತ್ತು ಸತ್ಯನಾರಾಯಣ ಪೂಜೆ, ರಾತ್ರಿ 7.00 ಕ್ಕೆ ಚೌತಿ ಹಬ್ಬ, ರಾತ್ರಿ 8.00 ಕ್ಕೆ ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮ, ರಾತ್ರಿ 9.00 ಗಂಟೆಗೆ ತುಳು ನಾಟಕ ಓಂಕಾರ, ಫೆ 21 ರಂದು ಬೆಳಿಗ್ಗೆ 10.00 ಗಂಟೆಗೆ ಕೊಂಡೆಲ್ತಾಯ ದೈವದ ಭಂಡಾರ ಇಳಿಸುವುದು, ಮದ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 6.30 ಕ್ಕೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ರಾತ್ರಿ 7.00 ಕ್ಕೆ ರಕ್ತೇಶ್ವರೀ ದೈವದ ನೇಮೋತ್ಸವ, ರಾತ್ರಿ 10.00 ಗಂಟೆಗೆ ಕೊಂಡೆಲ್ತಾಯ ದೈವದ ನೇಮೋತ್ಸವ, ರಾತ್ರಿ 1.00 ಗಂಟೆಗೆ ಪಂಜುರ್ಲು ದೈವದ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.

