ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಮೂಡುಬಿದಿರೆ ಹಾಗೂ ಪೊಂಪೈ ಕಾಲೇಜು ಐಕಳ ಇದರ ಸಹಭಾಗಿತ್ವದಲ್ಲಿ ಜಾನಪದ ಜ್ಞಾನೋತ್ಸವ ಹಾಗೂ ಜಾನಪದ ರಸಪ್ರಶ್ನೆ ಕಾರ್ಯಕ್ರಮವು 03.03.2026, ಮಂಗಳವಾರ ಬೆಳಿಗ್ಗೆ 9.30ಕ್ಕೆ ಪೊಂಪೈ ಕಾಲೇಜು, ಐಕಳ, ಕಿನ್ನಿಗೋಳಿಯಲ್ಲಿ ನಡೆಯಲಿದೆ. ಬೆಳಿಗ್ಗೆ ವಾಯ್ಸ್ ಆಫ್ ಆರಾಧನ ತಂಡದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಕೆ. ಭುವನಾಭಿರಾಮ ಉಡುಪ ಯುಗಪುರುಷ, ಕಿನ್ನಿಗೋಳಿ ಕಾರ್ಯಕ್ರಮ ಉದ್ಘಾಟಿಸಲಿರುವರು. ಶ್ರೀ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ ಅರ್ಚಕರು, ಶ್ರೀಕ್ಷೇತ್ರ ಕಟೀಲು ಆಶೀರ್ವಚನ ನೀಡಲಿರುವರು. ಡಾ. ರಾಜೇಶ್ ಆಳ್ವ ಬದಿಯಡ್ಡ ತುಳುವರ್ಲ್ಡ್ ಫೌಂಡೇಶನ್ನ ಸ್ಥಾಪಕ ದಿಕ್ಕೂಚಿ ಭಾಷಣ ಮಾಡಲಿರುವರು. ರೆ. ಫಾ. ಓಸ್ವಾಲ್ಡ್ ಮೊಂತೇರೊ ಸಂಚಾಲಕರು, ಪೋಂಪೈ ಕಾಲೇಜು, ಐಕಳ ಅಧ್ಯಕ್ಷತೆ ವಹಿಸಲಿರುವರು. ಗೌರವ ಉಪಸ್ಥಿತಿ : ಡಾ. ಪುರುಷೋತ್ತಮ ಕೆ.ವಿ. ಪ್ರಾಂಶುಪಾಲರು, ಪೊಂಪೈ ಕಾಲೇಜು, ಐಕಳ ಪದ್ಮಶ್ರೀ ಭಟ್ ನಿಡೋಡಿ ಅಧ್ಯಕ್ಷರು, ಕ.ಜಾ.ಪ ತಾಲೂಕು ಘಟಕ, ಮೂಡುಬಿದಿರೆ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅಧ್ಯಕ್ಷರು, ಕ.ಜಾ.ಪ ದಕ್ಷಿಣ ಕನ್ನಡ ರಾಜೇಶ್ ಸೈಲಾರ್ಕ್ ಕಾರ್ಯದರ್ಶಿ, ಕ.ಜಾ.ಪ ದಕ್ಷಿಣ ಕನ್ನಡ ಅಗರಿ ರಾಘವೇಂದ್ರ ರಾವ್ ಅಗರಿ ಎಂಟರ್‌ಪ್ರೈಸಸ್ ಶರತ್ ಶೆಟ್ಟಿ ಮುಂಡ್ಕೂರು. ಪತ್ರಕರ್ತರು ಹಾಗು ರಂಗಭೂಮಿ ಕಲಾವಿದರು. ಚೇತನಾ ರಾಜೇಂದ್ರ ಹೆಗ್ಡೆ ಸಂಚಾಲಕರು, ಕ.ಜಾ.ಪ ಮೂಡುಬಿದಿರೆ ಕಾರ್ಯಕ್ರಮ ನಿರ್ವಹಿಸಲಿರುವರು. ಚಂದ್ರಹಾಸ ದೇವಾಡಿಗ ಉಪಾಧ್ಯಕ್ಷರು, ಕ.ಜಾ.ಪ ಮೂಡುಬಿದಿರೆ ಧನ್ಯವಾದ ಸರ್ಪಿಸಲಿದ್ದಾರೆ.

