ಉಪ್ಪುಂದ: ಅಮ್ಮನವರತೊಪ್ಲು ಶ್ರೀರಾಮ ಭಜನಾ ಮಂದಿರ, ಶ್ರೀ ರಾಮ ಭಜನಾ ಮಂಡಳಿ ರಿ.. ಇದರ ನೂತನ ಶಿಲಾಮಯ ಶ್ರೀರಾಮ ಭಜನಾ ಮಂದಿರ ಲೋಕಾರ್ಪಣೆ, ಶ್ರೀರಾಮ ಪ್ರತಿಷ್ಠೆ-ಬ್ರಹ್ಮಕಲಶಾಭೀಷೇಕ, ನಾಗ ಪ್ರತಿಷ್ಠೆ-ಆಶ್ಲೇಷ ಬಲಿ ಸಂಭ್ರಮದಲ್ಲಿ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.

ನಿನ್ನೆ ಸಂಜೆ 5 ಗಂಟೆಯಿಂದ ದೇವತಾ ಕಾರ್ಯಕ್ರಮಗಳ ಆರಂಭ, ಶ್ರೀ ನಾಗದೇವರಿಗೆ ಪಂಚವಿಂಶತಿ (25) ಕಲಶ ಸ್ಥಾಪನೆ, ನವಗ್ರಹಾರಾಧನೆ, ಸಪರಿವಾರ ಶ್ರೀ ರಾಮಚಂದ್ರ ದೇವರಿಗೆ ಅಷ್ಟೋತ್ತರ ಶತ (108) ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ನೆರವೇರಿತು.
ಇಂದು ಬೆಳಿಗ್ಗೆ 6 ಗಂಟೆಗೆ ಧಾರ್ಮಿಕ ಕಾರ್ಯಕ್ರಮ, ನಾಗಶಿಲಾ ಪ್ರತಿಷ್ಠೆ, ಬೆಳಿಗ್ಗೆ 7-35ಕ್ಕೆ ಸಪರಿವಾರ ಶ್ರೀರಾಮಚಂದ್ರ ದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಗಣಹೋಮ, ಬ್ರಹ್ಮ ಕುಂಭಾಭೀಷೇಕ, ಮಹಾಪೂಜೆ, ಮಹಾಅನ್ನಸಂತರ್ಪಣೆ ನಡೆಯಿತು.
ಬೆಳಿಗ್ಗೆ 10-30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆಯಲ್ಲಿ ಮತ್ತು ಶೃಂಗೇರಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದ್ದಾರೆ.
ಇಂದು ಸಂಜೆ 6ರಿಂದ ಶ್ರೀ ನಾಗದೇವರಿಗೆ ಆಶ್ಲೇಷಾಬಲಿ, ಅನ್ನಸಂತರ್ಪಣೆ ನಡೆಯಿತು.
ನಾಳೆ ಬೆಳಿಗ್ಗೆ 7-45ಕ್ಕೆ ಪ್ರತೀ ಏಳು ವರ್ಷಗಳಿಗೊಮ್ಮೆ ಆಹೋರಾತ್ರಿ ನಡೆಯುವ 10ನೇ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಫೆ.24ರಂದು ದುರ್ಗಾಹೋಮ ನಡೆಯಲಿದೆ. ಫೆ.28ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

