ಸಮ್ಮೇಳನ ಸಮಾಜದ ಕನ್ನಡಿಯಂತೆ ನನ್ನ ಭಾಷೆ, ಸಾಹಿತ್ಯಕ್ಕೆ ಪ್ರೇರಕವಾಗಿದೆ -ಎ ಎಚ್ ಪಕ್ಕಲಡ್ಕ

0
3


ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೀಠವನ್ನು ನೀಡಿ ಸನ್ಮಾನಿಸಿ ಇಡೀ ದಿನ ಭಾಷೆಯ ಸೊಗಡನ್ನು ಸವಿಯಲು ಅವಕಾಶ ಮಾಡಿಕೊಟ್ಟ, ಯಶಸ್ವಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಎಲ್ಲಾ ಕೃಷಿಕ ಬಂಧುಗಳಿಗೆ, ನನ್ನ ಭಾಷೆ ಸಾಹಿತ್ಯಕ್ಕೆ ದಾರಿದೀಪ ಆಗುವಂತೆ ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಾಹಿತಿ ಅಬ್ದುಲ್ ಹಮೀದ್ ಪಕ್ಕಲಡ್ಕ ಸಲ್ಲಿಸಿದರು.
ಅವರು ಫೆಬ್ರವರಿ 21ರಂದು ಸರ್ವಾಧ್ಯಕ್ಷರ ನುಡಿಯಲ್ಲಿ ಅಭಿನಂದನೆ ಗೈದರು. ದ ಕ ಜಿಲ್ಲಾ ಕ ಸ ಪ ಅಧ್ಯಕ್ಷ ಡಾ ಎಂಪಿ ಶ್ರೀನಾಥ್ ಉತ್ತಮ ವ್ಯವಸ್ಥೆತ ಸಮಾರಂಭಕ್ಕಾಗಿ ನುಡಿ ನಮನ ಸಲ್ಲಿಸಿದರು. ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಪ್ರಯತ್ನವನ್ನು ಮಾಡಬೇಕೆಂದು ಎಲ್ಲರಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್, ಡಾ ಅಮರಶ್ರೀ ವಿನಂತಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಕನ್ನಡ ಶಾಲೆಯನ್ನು ಕಟ್ಟಿ ಬೆಳೆಸಿ ಸಂಸ್ಥಾಪಿಸಿದ ಕಡೆಂದಲೇ ಸುದರ್ಶನ ಶೆಟ್ಟಿ, ಪತ್ರಿಕೋದ್ಯಮದ ಪ್ರಸನ್ನ ಹೆಗ್ಡೆ, ಯಕ್ಷಗಾನದ ದಾಮೋದರ ಸಫಲಿಗ, ಪ್ರದರ್ಶನ ಕಲೆಯ ವೆಂಕಟೇಶ ಬಂಗೇರ, ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಕಡೆಂದಲೇ ಡಾ ಕಿರಣ್ ಭಟ್, ಕೃಷಿ ತಜ್ಞ ಎಡ್ವರ್ಡ್ ರೆಬೆಲೊ ತಾಕೊಡೆ, ಸಮ್ಮೇಳನದ ಯಶಸ್ವಿ ಕಾರ್ಯಾಧ್ಯಕ್ಷ, ಕೆಎಂಎಫ್ ನಿರ್ದೇಶಕ ಕೆ ಪಿ ಸುಚರಿತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಪವನ ಶರಣಪ್ಪ ಮೇಗೂರು, ಹರೀಶ್ ಬಡಿಗೇರ್, ರಿಯಾ ವಿದ್ಯಾಧರ ಕಮತೆ, ಕಡಬಗೇರಿ ವಿನಯ, ಖುಷಿ, ಶ್ರಾವಂತಿ ಪುತ್ರಾಯ, ಸಮೀಕ್ಷಾ ಸಂದೀಪ್ ಸಮಾಜ ನವರ, ಪ್ರಜ್ಞ ಶೀತಲ ಪಾಟೀಲ, ಸಿಂಧೂ ಶೀತಲ ಚೌಗುಲೆ, ಜಕ್ಕವ್ವ ಕರೆಪ್ಪ ಪೂಜೇರಿ, ಸುಪ್ರೀತಾ ಲಕ್ಷ್ಮಣ ನಾಯ್ಕ್, ಪದ್ಮಶ್ರೀ ಶ್ರೀಪಾದ ಹೆಗಡೆ ಅವರುಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕ ಸಾ ಪ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರು, ವೈಬ್ರೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ನಾಯಕ್, ಶ್ರೀಪತಿ ಭಟ್, ರಾಜ ವರ್ಮ ಬೈಲಂಗಡಿ ಹಾಜರಿದ್ದರು. ಸಮ್ಮೇಳನಕ್ಕಾಗಿ ಸಹಕರಿಸಿದ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಗೌರವಿಸಲಾಯಿತು.
ಶಿಕ್ಷಣ ಮತ್ತು ರಂಗಭೂಮಿಯ ಬಗ್ಗೆ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಮ್ ಸುಳ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ಬಗ್ಗೆ ನ್ಯಾಯವಾದಿ ಶ್ವೇತಾ ಜೈನ್, ಶಿಕ್ಷಣ ಮತ್ತು ಸಾಹಿತ್ಯದ ಬಗ್ಗೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ನಿರ್ದೇಶಕ ಡಾ ಬಿ ಪಿ ಸಂಪತ್ ಕುಮಾರ್, ಕೃಷಿ ಬದುಕಿನ ಬಗ್ಗೆ ಪೆರವಾಜೆ ಪ್ರಭಾರ ಮು. ಶಿ. ಅಸ್ಮಾ ವಿಶೇಷ ಉಪನ್ಯಾಸಗಳನ್ನು ನೀಡಿದರು.
ಸಾಂಸ್ಕೃತಿಕ ವೈವಿಧ್ಯ, ಭಾವಗಾನ, ನೃತ್ಯ ವೈಭವ ಇತ್ಯಾದಿ ಕಾರ್ಯಕ್ರಮಗಳು ಮನರಂಜನೆಯನ್ನು ನೀಡಿತು.
ಕೋಶ್ಯಾಧ್ಯಕ್ಷ ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿದ್ದರು. ರಾಮಕೃಷ್ಣ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸದಾನಂದ ನಾರಾವಿ ಧನ್ಯವಾದ ಸಲ್ಲಿಸಿದರು.
.

LEAVE A REPLY

Please enter your comment!
Please enter your name here