ಬಂದಾರು: 3ನೇ ವರ್ಷದ ಹೊನಲು ಬೆಳಕಿನ ಮಹಿಳೆಯರ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ

0
15

ಬಂದಾರು: ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಇದರ ವತಿಯಿಂದ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್‌ ಇಂಡಿಯಾ ಇವರ ಅನುಮತಿಯೊಂದಿಗೆ ಜಿಲ್ಲಾ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ ಸಹಕಾರದೊಂದಿಗೆ ನಡೆದ 3ನೇ ವರ್ಷದ ಹೊನಲು ಬೆಳಕಿನ ಮಹಿಳೆಯರ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಟೀಮ್ ಶಿವಾಜಿ ಫ್ರೆಂಡ್ಸ್ ಶಿವನಗರ-ಬಂದಾರು ತಂಡ ದ್ವಿತೀಯ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಬಂದಾರು: ಫೆ 21.ಚಾಮುಂಡೇಶ್ವರಿ ದೇವಸ್ಥಾನ ಅರಿಕೋಡಿ ಇದರ ವತಿಯಿಂದ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್‌ ಇಂಡಿಯಾ ಇವರ ಅನುಮತಿಯೊಂದಿಗೆ ಜಿಲ್ಲಾ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಆರಿಕೋಡಿ ವಠಾರದಲ್ಲಿ ನಡೆದ 3ನೇ ವರ್ಷದ ಹೊನಲು ಬೆಳಕಿನ
ಮಹಿಳೆಯರ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಶಿವಾಜಿ ಫ್ರೆಂಡ್ಸ್ ಶಿವನಗರ -ಬಂದಾರು ತಂಡ ದ್ವಿತೀಯ ನಗದು, ಟ್ರೋಫಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಸುವರ್ಣ ರವರು ಬೆಸ್ಟ್ ಕ್ಯಾಚರ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.ಕ್ಯಾಪ್ಟನ್ ಸುವರ್ಣ,
ಸುಮಿತಾ, ಖುಷಿ, ಆತ್ವಿ, ಅನ್ನಪೂರ್ಣ, ಹೀಮನ್ಯ, ಹೇಮಶ್ರೀ, ಹರ್ಷಿಣಿ, ಸ್ವಾತಿ ಅದ್ಬುತ ಪ್ರದರ್ಶನ ನೀಡಿದರು, ಗಿರೀಶ್ ಗೌಡ ಬಿ. ಕೆ ಬಂದಾರು ಮಾಲಕತ್ವದ ತಂಡ ರಂಜಿತ್ ನಡುಮಜಲು,ವರುಣ್,ತ್ರಿಲೋಕ್, ತ್ರಿಶಾಂಕ್ ನೆಕ್ಕರಾಜೆ,ಯೋಗೀಶ್ ಗೌಡ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here