ಶ್ರೀ ಚಿತ್ತೇರಿ ಚತುರ್ಮುಖ ಬ್ರಹ್ಮಶಾರದೆ ಹಾಗೂ ಪರಿವಾರ ದೇವಸ್ಥಾನ ಶ್ರೀ ಕ್ಷೇತ್ರ ಬಳ್ಮನೆ ವಾರ್ಷಿಕ ಜಾತ್ರಾ ಮಹೋತ್ಸವವು ಎ.1 ಮತ್ತು ಎ. 2 ರಂದು ನಡೆಯಲಿದೆ.
ಎ.1 ರಂದು ಬ್ರಹ್ಮಕಲಶ ಸ್ಥಾಪನೆ, ಆಶ್ಲೇಷಾ ಬಲಿ ಹಾಗೂ ಅನ್ನಸಂತರ್ಪಣೆ ಜರುಗಲಿದೆ.
ಎ.2ರಂದುಬ್ರಹ್ಮಕಲಶಾಭಿಷೇಕ. ಮೂಡುಗಣಪತಿ ಸೇವೆ, ಅಷ್ಟೋತ್ತರ ಶತ ನಾರಿಕೇಳ ಗಣಯಾಗ, ಚಂಡಿಕಾಯಾಗ ಜರುಗಲಿದೆ. ಮಧ್ಯಾಹ್ನ 2.30 ರಿಂಧ ಭಜನಾ ಕಾರ್ಯಕ್ರಮ, ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಮನೋಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8 ಗಂಟೆಗೆ ಭಕ್ತಿ ಗಾನಾಮೃತಾ ಅದ್ದೂರಿ ಸಾಂಸ್ಕೃತಿಕ ವೈಭವ ನಡೆಲಿದೆ ಯೋಗ ಗುರುಕುಲ ಪಾಂಡೇಶ್ವರದ ಡಾ. ವಿಜಯ ಮಂಜರು ಇವರು ಧಾರ್ಮಿಕ ಉಪನ್ಯಾಸ ನೀಡಲಿರುವರು.
ರಾತ್ರಿ 11 ರಿಂಧ ಮಹಾರಂಗೋತ್ಸವ ಪೂಜೆ, ಪಂಚವಾದ್ಯ ಸೇವೆ, ಸಂದರ್ಶನ, ಗೆಂಡೋತ್ಸವ ತುಲಭಾರ ಸೇವೆ ಹಾಗೂ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.

