ಮುಲ್ಕಿ: ತೋಕೂರು ನಿವಾಸಿ ವೇದ ಮೂರ್ತಿ ಸುಬ್ರಹ್ಮಣ್ಯ ಭಟ್(54) ಹೃದಯಾಘಾತದಿಂದ ಭಾನುವಾರ ರಾತ್ರಿ ನಿಧನರಾದರು. ಅವರು ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ
ವೇದ ವಿದ್ವಾಂಸರಾಗಿ,ಆಚಾರವಂತ,ವಿಚಾರವಂತ, ಷೋಡಶ ಸಂಸ್ಕಾರ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು, ಯಕ್ಷಗಾನ ವೇಷದಾರಿಯಾಗಿ ಹಾಗೂ ತಾಳಮದ್ದಳೆಯಲ್ಲಿ, ಅರ್ಥದಾರಿಯಾಗಿದ್ದರು, ಭಾಗವತ ಪ್ರವಚನದಲ್ಲಿ ಸೈ ಎನಿಸಿಕೊಂಡಿದ್ದಾರೆ ಕರಾವಳಿ ಭಾಗದ ಅಪರಕ್ರಿಯೆಯಲ್ಲಿ ಯಾವುದೇ ಜಿಜ್ಞಾಸೆಗಳಿದ್ದರೂ ಇದಮಿತ್ತಮ್ ಎಂದು ಉತ್ತರ ನೀಡುತ್ತಿದ್ದರು ಪೂರ್ವಾಶ್ರಮದಲ್ಲಿ ಪೇಜಾವರ ಶ್ರೀಗಳಿಗೆ ನಿಕಟವರ್ತಿಯಾಗಿದ್ದರು ಅವರಿಗೆ ಅಪಾರ ಶಿಷ್ಯ ವರ್ಗದವರು ಇದ್ದಾರೆ
ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು,ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು,
ಕಟೀಲು ಶಿವಳ್ಳಿ ಸಭಾದ ಅಧ್ಯಕ್ಷ
ಅನಂತಪದ್ಮನಾಭ ಆಚಾರ್ಯ ಹಾಗೂ ಸದಸ್ಯರು ಉದ್ಯಮಿ ಅರವಿಂದ ಪೂಂಜಾ, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ರಾಮಣ್ಣ ದೇವಾಡಿಗ ಮುಂಬೈ ತೋಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರು,ಮಾಜೀ ಅಧ್ಯಕ್ಷ ಹರಿದಾಸ್ ಭಟ್, ತೋಕೂರು ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಊರಿನ ಗ್ರಾಮಸ್ಥರು ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

