ದಿನಾಂಕ 27-02-2026 ನೇ ಶುಕ್ರವಾರದಂದು ಪಾಲಡ್ಕ ಆರಾಧ್ಯ ಮನೆಯ ಹತ್ತಿರ ಕೊರಂಗಲ್ ಗದ್ದೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಹರಕೆಯ ಬಯಲಾಟವಾಗಿ ಆಡಿತೋರಿಸಲಿರುವರು. ಸಂಜೆ ಗಂಟೆ 6.00ಕ್ಕೆ ಚೌಕಿ ಪೂಜೆ ಹಾಗೂ ರಾತ್ರಿ 08.00ಕ್ಕೆ ಅನ್ನಸಂತರ್ಪಣೆ ಜರುಗಲಿದೆ. ಯಕ್ಷಗಾನ ಮುಗಿದ ನಂತರ ಬರುವ ಕಲಾಭಿಮಾನಿಗಳಿಗೆ ಬಸ್ಸಿನ ವ್ಯವಸ್ಥೆ ಇರುವುದು ಎಂದು ತಿಳಿಸಲಾಗಿದೆ.

