ಉಜಿರೆಯ ಶ್ರೀ ಜನಾರ್ಧನ ಸ್ವಾಮಿಯ. ಬ್ರಹ್ಮಕಲಶೋತ್ಸವ ಮಾರ್ಚ್ 3ರಿಂದ ಮಾರ್ಚ್ 11ನೇ ತಾರೀಕಿನವರೆಗೆ ಭಕ್ತಿ ಸಡಗರ ಸಂಭ್ರಮ ವಿಜ್ರಂಭಣೆಯಿಂದ ನಡೆಯಲಿದ್ದು,ವಿಜಯ ಗೋಪುರ ಲೋಕಾರ್ಪಣೆ,ನೂತನ ಬ್ರಹ್ಮರಥ ಮತ್ತು ಪುಷ್ಪರಥ ಸಮರ್ಪಣೆಯ ಮಹಾ ವೈಭವ ನಡೆಯಲಿದ್ದು,ಈ ಮಹಾ ವೈಭವವನ್ನು ನಮ್ಮ ಕಣ್ಣಿನಲ್ಲಿ ನೋಡುವುದು ನಮ್ಮ ಹಿರಿಯರು ಮಾಡಿದ ಪುಣ್ಯದ ಫಲದ ಸೌಭಾಗ್ಯ,2ನೇ ತಾರೀಕು ಸೋಮವಾರದಂದು ಪೂಜ್ಯಡಾ. ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಲಾಯಿಲ ಗ್ರಾಮದ ಗಣ್ಯರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರು ಹಾಗೂ ಊರವರ ಸಂಪೂರ್ಣವಾದ ಸಾಕಾರದೊಂದಿಗೆ 1000 ತೆಂಗಿನಕಾಯಿ,ಅಕ್ಕಿ ತರಕಾರಿಗಳು, ಬಾಳೆಗೊನೆ,ಸೀಯಾಳ,ಬೆಲ್ಲ,ಸಕ್ಕರೆ, ವೀಳ್ಯದೆಲೆ, ಮಾವಿನ ಮಿಡಿ,ಹಲಸಿನಕಾಯಿಯನ್ನು 2ನೇ ತಾರೀಖಿನ ಹೊರೆಕಾಣಿಕೆಯಲ್ಲಿ ಭಕ್ತರೊಂದಿಗೆ ಸೇರಿಕೊಂಡು ಲಾಯಿಲದಿಂದ ಉಜಿರೆಯವರೆಗೆ ಭಕ್ತರ ಒಂದುಗೂಡುವಿಕೆಯಲ್ಲಿ ಕೊರೆಕಾಣಿಕೆ ಸಾಗಿ ಬರಲಿದೆ ಎಂದು ಬೆಳ್ತಂಗಡಿ ತಾಲೂಕಿನ ಹಿರಿಯ ವಕೀಲರಾದ ಬಿ ಕೆ ಧನಂಜಯ್ ರಾವ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಗಿರೀಶ್ ಡೋಂಗ್ರೆ.ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಲಾಯಿಲ, ಸುರೇಶ್ ಬರಮೇಲು.ಅಧ್ಯಕ್ಷರು ಪಿಲಿಪಂಜರ ದೈವಸ್ಥಾನ ವ್ಯವಸ್ಥಾಪನ ಸಮಿತಿ, ಗಣೇಶ್ R. ಮಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯಿತ ಲಾಯಿಲ, ಸುಧಾಕರ BL. ಮಾಜಿ ತಾಲೂಕು ಪಂಚಾಯತ್ ಸದಸ್ಯರು ಬೆಳ್ತಂಗಡಿ ತಾಲೂಕು, ಆಶಾ ಸಲ್ದಾನ.ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಲಾಯಿಲ, ಅಧ್ಯಕ್ಷರು ಲಾಯಿಲ ಒಕ್ಕೂಟ, ರಮೇಶ್ R,ಅಧ್ಯಕ್ಷರು ಗಣೇಶೋತ್ಸವ ಸಮಿತಿ ಲಾಯಿಲ, ಗುರು ಅಜೆಕಲ್. ಸದಸ್ಯರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಯಿಲ, ಅನಿಲ್ ಕಾಶಿಬೆಟ್ಟು, ಸದಸ್ಯರು ಪಿಲಿಪಂಜರ ದೈವಸ್ಥಾನ ವ್ಯವಸ್ಥಾಪನ ಸಮಿತಿ, ಮೇಲ್ವಿಚಾರಕರಾದ ರಾಮ್ ಕುಮಾರ್ ಮತ್ತು ಸುಶಾಂತ್, ಸೇವಾಪ್ರತಿನಿಧಿ ಗೀತಾ,ಗ್ರಾಮಸ್ಥರು ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

