ಅಕ್ಷಯ ಕಾಲೇಜಿನ ವಾರ್ಷಿಕ ಶಿಬಿರ 2025-26 : ಸೇವಾಪುರಸ್ಕಾರ

0
11

ಅಕ್ಷಯ ಕಾಲೇಜು ಪುತ್ತೂರು ಇದರ ನೇತೃತ್ವದಲ್ಲಿ ನನ್ನ ಭಾರತಕ್ಕಾಗಿ ಯುವಜನತೆ ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ವಾರ್ಷಿಕ ವಿಶೇಷ ಶಿಬಿರ 2025-26 ರಂದು ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯ ನಗರ ಪೆರ್ನೆ ಇಲ್ಲಿ ನೆರವೇರಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ಪದಬರಿ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಪೆರ್ನೆ ಇವರು ವೇದಿಕೆಯನ್ನು ಅಲಂಕರಿಸಿ ಶಿಬಿರಾರ್ಥಿಗಳನ್ನು ಹಾಗೂ ಸಭೆಯನ್ನು ಕುರಿತು ಎರಡು ಸಾಲು ಪದ್ಯದ ಮೂಲಕ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಅಂತೇ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಉಮ್ಮಪ್ಪ ಪೂಜಾರಿ ಪಿ ನಿವೃತ್ತ ಡೀನ್ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳು ಮಂಗಳೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಇಂದಿನ ಈ ದಿನದಲ್ಲಿ ಬೃಹತ್ ಸಂಸ್ಥೆಯಾದ ಅಕ್ಷಯ ಕಾಲೇಜು ನಮ್ಮ ಪರಿಸರ ಆಯ್ಕೆ ಮಾಡಿ ಈ ಸಂಸ್ಥೆಯ  ಬೆಳವಣಿಗೆಯನ್ನು ಕಾಣಲು ಈ ಶಿಬಿರವು ಸುಂದರ ದಾರಿ ಮಾಡಿಕೊಡುತ್ತಿದೆ ಎಂದು ಪ್ರಶಂಶಿಸಿದರು. ಅಂತೆಯೇ ಇನ್ನೋರ್ವ ಅತಿಥಿಗಳಾದ ಗಂಗಾಧರ್  ರೈ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ನಿಸರ್ಗ ವಡ್ಯದಗಯ ಪೆರ್ನೆ , ಇವರು ಆಸೀನರಾಗಿದ್ದು ಸಭೆಯ ಕುರಿತು ಒಂದು ಒಳ್ಳೆಯ ನುಡಿ ನುಡಿದರು ಅದೇ, ದಾಟಿ ಬಂದ ದೋಣಿ ಮತ್ತು ಏರಿ ಬಂದ ಏಣಿಯನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು ಹಾಗೂ ಶಿಬಿರಾರ್ಥಿಗಳ ಹುಮ್ಮಸ್ಸನ್ನು ಹೊಗಳಿದರು.

ಅಂತೆಯೇ ಇನ್ನೋರ್ವ ಅತಿಥಿಯಾಗಿ ಶಿವರಾಜ್ ಪಿ ಆರ್ ಅಧ್ಯಕ್ಷರು ಯುವವಾಹಿನಿ (ರಿ) ಮಾಣಿ ಘಟಕ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಭೆಯನ್ನು ಹಾಗೂ ಶಿರಾರ್ಥಿಗಳನ್ನು ಉದ್ದೇಶಿಸಿ ಇಂತಹ ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥೆ, ಸಂಘಗಳೇ ಮುಂದೊಂದು ದಿನ ಪರಿಸರದಲ್ಲಾಗುವ ಪ್ರಳಯ, ಭೂಕಂಪ ಮುಂತಾದವು ಸಂಭವಿಸಿದಾಗ ಮುಕ್ತ ಮನಸ್ಸಿನಲ್ಲಿ ಸಮಾಜ ಸೇವೆ ಜನರಕ್ಷಣೆಗೆ ಮುಂದೆ ನಿಲ್ಲುತ್ತದೆ ಎಂದು ಹೇಳಿದರು ಅಂತೆಯೇ ಸಂಪತ್ ಕೆ ಪಕ್ಕಳ ಪ್ರಾಂಶುಪಾಲರು ಅಕ್ಷಯ ಕಾಲೇಜು ಪುತ್ತೂರು ಇವರು ವೇದಿಕೆಯಲ್ಲಿ ಆಸೀನರಾಗಿದ್ದು ಸಂಸ್ಥೆ ಬಗ್ಗೆ ಹಾಗೂ ಅವರ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಿಂದ ಆದ ಅನೇಕ ಬದಲಾವಣೆ ಕುರಿತು ಮನದಟಿಸಿದರು.

ವೇದಿಕೆಯಲ್ಲಿ ಡಾ.ಅಕ್ಷಯ್ ನಡುಬೈಲು ವ್ಯವಸ್ಥಾಪಕ ಟ್ರಸ್ಟಿ, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು ಮತ್ತು ಶಿಬಿರಾಧಿಕಾರಿಗಳು ವೇದಿಕೆಯಲ್ಲಿ ಉಪಸ್ತಿತರಿದ್ದರು. ಪೆರ್ನೆ ಪರಿಸರದ ವಿವಿಧ ಕ್ಷೇತ್ರಗಳ ಸಾಧಕರ ಸೇವೆಯನ್ನು ಗುರುತಿಸಿ ಅಕ್ಷಯ ಸೇವಾ ಪುರಸ್ಕಾರವನ್ನು ಕೊಡಲಾಯಿತು. ಈ ಸಾಧಕ ಪುರಸ್ಕಾರವನ್ನು ಪಡೆದಿರುವಂತಹ ಶ್ರೀ ಲೋಕಯ್ಯ ಶೇರ (ದೈವ ನರ್ತಕರು) ,ಶ್ರೀಯುತರು ಜನಪದ ಕ್ಷೇತ್ರದಲ್ಲಿ ಸಾಧನೆಗೈದಿರುತ್ತಾರೆ. ಪ್ರಹ್ಲಾದ್ ಶೆಟ್ಟಿ ಜೆ. ಶ್ರೀಯುತರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದಿದ್ದರೆ. ಹರೀಶ್ ಪೆರ್ಗಡೆ, ಶ್ರೀಯುತರು ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆಗೈದಿರುತ್ತಾರೆ. ಮೋನಪ್ಪ ಗೌಡ, ಕಳೆಂಜ ಶ್ರೀಯುತರು ಕೃಷಿ ಕ್ಷೇತ್ರದಲ್ಲಿ ಸಾಧನೆಗೈದಿರುತ್ತಾರೆ. ಡಾ.ಯಾಕೂಬ್ ಕಡಂಬು, ಶ್ರೀಯುತರು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ.

ವಿದ್ಯಾಸನತ್ ಶೆಟ್ಟಿ. ಇವರು ಕಲಾ ಕ್ಷೇತ್ರದಲ್ಲಿ ಸಾಧನೆಗೈದಿರುತ್ತಾರೆ. ಜಯಾನಂದ ಪೆರಾಜೆ, ಶ್ರೀಯುತರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ವಿದ್ಯಾಧರ್ ಪೂಜಾರಿ (ನಿವೃತ್ತ ಸೈನಿಕರು) ಶ್ರೀಯುತರು ರಾಷ್ಟ್ರ ಸೇವೆಯಲ್ಲಿ ಸದನೆಗೈದಿದ್ದಾರೆ. ರೋಹಿಣಿ ಬಿ. ಇವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದಿರುತ್ತಾರೆ. ಬಾಲಕೃಷ್ಣ ಸಾಲ್ಯಾನ್, ಶ್ರೀಯುತರು ತಮ್ಮನು ತಾವು ಸಮಾಜಮುಖಿ ಸೇವೆಯಲ್ಲಿ ಶ್ರಮಿಸಿ, ಶ್ರಮಜೀವಿ ಎಂಬ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಅಂತೆಯೇ ಕಾರ್ಯಕ್ರಮದಲ್ಲಿ ತಂಡ ‘ಭೀಮ’ ತಯಾರಿಸಿದ ‘ಶಿಬಿರವಾಣಿ’ ಯನ್ನು ಅಧ್ಯಕ್ಷರು ಸಭೆಯ ಮುಂದೆ ಅನಾವರಣಗೊಳಿಸಿದರು. ಈ ಸಭಾ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಪ್ರಾರ್ಥಿಸಿ, ಲಿಖಿತ ಸ್ವಾಗತಿಸಿದರು, ವೈಭವಿ ವಂದಿಸಿದರು, ಕೃಪ ಕೆ. ಸನ್ಮಾನ ಪತ್ರವನ್ನು ವಾಚಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ವೀಕ್ಷಾ ನೆರವೇರಿಸಿದರು ಹಾಗೂ ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಅಕ್ಷಯ ಕಲಾ ವೈಭವ – ‘ವಿಶ್ವ ಗುರು ಭಾರತ’ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮವು ನಡೆಯಿತು.

LEAVE A REPLY

Please enter your comment!
Please enter your name here