ಮೃತ ಮಹಿಳೆಯ ಗರ್ಭಕೋಶದಿಂದ ಹುಟ್ಟಿದ ಹೊಸ ಜೀವ

0
39

ಬ್ರಿಟನ್ : ಇದು ವೈದ್ಯಕೀಯ ಲೋಕದ ಒಂದು ಅದ್ಭುತ ಸಾಧನೆಯಾಗಿದ್ದು, ಇತ್ತೀಚೆಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮೃತ ಮಹಿಳೆಯ ಗರ್ಭಕೋಶವನ್ನು ಕಸಿ ಮಾಡಿದ ನಂತರ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬ್ರಿಟನ್‌ನ ಗ್ರೇಸ್ ಬೆಲ್ ಎಂಬ ಮಹಿಳೆ-ಡಿಸೆಂಬರ್ 2025 ರಲ್ಲಿ ಲಂಡನ್‌ನ ಆಸ್ಪತ್ರೆಯೊಂದರಲ್ಲಿ ಹೂಗೋ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದು, ಸಾಮಾನ್ಯವಾಗಿ ಕೈಗಳನ್ನು ಹೃದಯ, ಕಿಡ್ನಿ, ಲಿವರ್‌ಗಳನ್ನು ದಾನ ನೀಡಲಾಗುತ್ತದೆ. ಕಿಡ್ನಿ ಹಾಗೂ ಲಿವರ್ ಹೊರತುಪಡಿಸಿ ಮತ್ತೆಲ್ಲವನ್ನೂ ಸತ್ತ ನಂತರವೋ ಅಥವಾ ಮೆದುಳು ನಿಷ್ಕ್ರಿಯಗೊಂಡಂತಹ ಸಂದರ್ಭದಲ್ಲಿ ದಾನ ನೀಡಲಾಗುತ್ತದೆ.

ಹಾಗೇಯೇ ಇಲ್ಲಿ ಮಹಿಳೆಯೊಬ್ಬರಿಗೆ ಮೃತ ಮಹಿಳೆಯ ಗರ್ಭಕೋಶವನ್ನು ಟ್ರಾನ್ಸ್ಪ್ಲಾಂಟ್ ಮಾಡಲಾಗಿತ್ತು. ಆ ಗರ್ಭಕೋಶದ ಮೂಲಕ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ವಿಚಾರ ಈಗ ಅಂಗಾಂಗ ದಾನದ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.

LEAVE A REPLY

Please enter your comment!
Please enter your name here