ಚಾರ್ವಾಕ ಕೊರಿಯಾನ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಪ್ರತಿಷ್ಠಾ ಕಲಶೋತ್ಸವ, ದೈವಗಳ ನೇಮೋತ್ಸವ- ಆಮಂತ್ರಣ ಅನಾವರಣ

0
11

ಕಾಣಿಯೂರು : ಚಾರ್ವಾಕ ಕೊರಿಯಾನ ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ಗರಡಿ ಮತ್ತು ದೈವಗಳ ಪ್ರತಿಷ್ಠಾ ಕಲಶೋತ್ಸವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಹಾಗೂ ಪರಿವಾರ ದೈವಗಳ ನೇಮೋತ್ಸವವು ಎ 22-25ರವರೆಗೆ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೋರಿಯಾನ ಗರಡಿ ಕ್ಷೇತ್ರದಲ್ಲಿ ಫೆ. 25ರಂದು ಬಿಡುಗಡೆಗೊಳಿಸಲಾಯಿತು.

ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಜಯಕುಮಾರ್ ಸೊರಕೆ, ಗರಡಿಯ ಸೇವಾ ಟ್ರಸ್ಟಿನ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಚೀರ್ಣೋದ್ಧಾರ ಸಮಿತಿಯ ಸಂಚಾಲಕರೂ ಆದ ಗಣೇಶ್ ಉದನಡ್ಕ, ಟ್ರಸ್ಟಿನ ಉಪಾಧ್ಯಕ್ಷ ವಸಂತ ದಲಾರಿ, ಟ್ರಸ್ಟಿನ ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಡಿಗುತ್ತು, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ವಿನೋದ್ ಪೂವಪ್ಪ ದೈಪಿಲ, ಸ್ವಯಂಸೇವಕ ಸಮಿತಿ ಅಧ್ಯಕ್ಷನಂದನ್ ಕಜೆ, ಟ್ರಸ್ಟಿಗಳಾದ ಗೋಪಾಲಕೃಷ್ಣ ಅಭಿಕಾರ, ಪ್ರಸನ್ನ ಅಭಿಕಾರ, ಅನಿಲ್ ನಡುಬೈಲ್, ನಯನ ಕಲಾಯಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ವಿಶ್ವನಾಥ ದೇವಿನಗರ, ಕೇಶವ ನಾಯಕ್ ಚಾರ್ವಾಕ, ನಾರ್ಣಪ್ಪ ಜತ್ತೋಡಿ, ಮಾಧವ ಕಲಾಯಿ, ಜತ್ತಪ್ಪ ಗೌಡ ಜತ್ತೋಡಿ, ಅವಿನಾಶ್ ದಲಾರಿ, ನಾರಾಯಣ ಜತ್ತೋಡಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here