ದಿನಾಂಕ 01-03-2026 ರಂದು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯ, ಪಾಣೆಮಂಗಳೂರು ಇಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಪದಗ್ರಹಣ ಸಮಾರಂಭ ಮತ್ತು ಬಂಟ್ವಾಳ ತಾಲೂಕು ಆಮಂತ್ರಣ ವೇದಿಕೆಯ ವರ್ಷದ ಹರ್ಷ ಕಾರ್ಯಕ್ರಮವು ನಡೆಯಲಿದೆ. ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದ. ಕ ಇದರ ಜಿಲ್ಲಾ ಅಧಿಕಾರಿಯಾಗಿರುವ ಬಿಂದಿಯಾ ಎನ್ ನಾಯಕ್ ಇವರು ಉದ್ಘಾಟಿಸಲಿದ್ದಾರೆ.
ಆಮಂತ್ರಣ ಪರಿವಾರದ ಸಂಸ್ಥಾಪಕರಾದ ವಿಜಯಕುಮಾರ್ ಜೈನ್ ಪದಪ್ರದಾನ ನೆರವೇರಿಸಲಿದ್ದು, ಆಮಂತ್ರಣ ದ. ಕ ಜಿಲ್ಲಾಧ್ಯಕ್ಷರಾಗಿ ವಿಂಧ್ಯಾ ಎಸ್ ರೈ ಕಡೇಶಿವಾಲಯ, ಉಪಾಧ್ಯಕ್ಷರಾಗಿ ಅನಿತಾ ಶೆಟ್ಟಿ ಮೂಡಬಿದ್ರೆ ಮತ್ತು ಜಿಲ್ಲಾ ನಿರ್ದೇಶಕರುಗಳು ಪದಸ್ವೀಕಾರ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇದರ ತಾಲೂಕು ಅಧಿಕಾರಿಯಾಗಿರುವ ಶೇಷಗಿರಿ ನಾಯ್ಕ್, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷರಾದ ವಿಶ್ವನಾಥ್ ಬಂಟ್ವಾಳ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ಮೇಲ್ವಿಚಾರಕರಾದ ವಿಶ್ವನಾಥ್, ಸಂಪನ್ಮೂಲ ವ್ಯಕ್ತಿಗಳಾಗಿ ದ. ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ತಾರನಾಥ್ ಕೈರಂಗಳ ಮತ್ತು ಗೋಪಾಲಕೃಷ್ಣ ನೇರಳಕಟ್ಟೆ, ಆಮಂತ್ರಣ ಉಡುಪಿ ಜಿಲ್ಲಾ ಅಧ್ಯಕ್ಷರಾದ ಪುಷ್ಪಪ್ರಸಾದ್ ಉಡುಪಿ, ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಅಮಿತಾ ಶಮಂತ್, ಆಮಂತ್ರಣ ಪರಿವಾರದ ರಾಜ್ಯಪ್ರತಿನಿಧಿಗಳು, ಮತ್ತು ತಾಲೂಕು ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಸನ್ಮಾನ, ಬಾಲಪ್ರತಿಭೆಗಳಿಗೆ ಅಭಿನಂದನಾ ಸನ್ಮಾನ,ಕವಿಮನಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಗಾರ,ನಿಧಿಶೋಧನೆ, ವಿದ್ಯಾರ್ಥಿಗಳಿಗೆ ಚಿತ್ರಕಲಾ ಕಾರ್ಯಗಾರ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷೆ ಯಾದ ರಶ್ಮಿತಾ ಸುರೇಶ್ ಜೋಗಿಬೆಟ್ಟು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

