ಬಜಗೋಳಿ : ಹಿಂದೂ ಧರ್ಮ, ಸಂಸ್ಕೃತಿ ಹಾಗೂ ರಾಷ್ಟ್ರ ಚಿಂತನೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದೆ.
ಈ ಸಭೆ 1 ಮಾರ್ಚ್ 2026, ಆದಿತ್ಯವಾರ ಸಂಜೆ 5:00 ಗಂಟೆಯಿಂದ ಬಜಗೋಳಿಯ ಗಣಪತಿ ಸಭಾಭವನ, ದಿಡಿಂಬಿರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ರಾಷ್ಟ್ರ ಜಾಗೃತಿ, ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆ ಹಾಗೂ ರಾಷ್ಟ್ರ ಭಕ್ತಿ ವಿಷಯಗಳ ಕುರಿತು ಪ್ರಬೋಧನಾತ್ಮಕ ಉಪನ್ಯಾಸಗಳು ನಡೆಯಲಿವೆ.
ಹಿಂದೂ ಸಮಾಜದ ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

