ಬಿಎಂಎಸ್.ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರಧಾನ ಸಮಾರಂಭ

0
19

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಗೆ ಸಂಯೋಜಿತವಾಗಿರುವ ಸ್ವಾಯತ್ತ ಸಂಸ್ಥೆಯಾದ ಬೆಂಗಳೂರಿನ ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು, 2025 ರ ಬ್ಯಾಚ್‌ನ ಪದವಿ ದಿನ-II ಸಮಾರಂಭ.

ಕರ್ನಾಟಕ ಸರ್ಕಾರದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿಮಿಟೆಡ್‌ನ ಅಧ್ಯಕ್ಷರಾದ ಎಲ್.ಕೆ. ಅತೀಕ್ ರವರು, ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನ ಬಿಒಜಿ, ಬಿಒಜಿ ಸದಸ್ಯ ಕರ್ನಲ್ (ನಿವೃತ್ತ) ಎಚ್.ಎಸ್. ಶಂಕರ್ ರವರು, ಪ್ರಾಂಶುಪಾಲರಾದ ಡಾ. ಭೀಮಶಾ ಆರ್ಯರವರು ಮತ್ತು ಟ್ರಸ್ಟಿಗಳು, ಅಧ್ಯಾಪಕರು ದೀಪ ಬೆಳಗಿಸಿ ಪದವಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿದರು.

ಶ್ರೇಯಾಂಕ ಪಡೆದವರಿಗೆ ಪದವಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಜೊತೆಯಲ್ಲಿ ಪದವಿ ಪ್ರಧಾನ ಮಾಡಲಾಯಿತು.

ಎಲ್.ಕೆ.ಅತೀಕ್ ರವರು ಮಾತನಾಡಿ ದೇಶದಲ್ಲಿ ಇಂಜನಿಯರಿಂಗ್ ಪದವಿ ಪಡೆದವರು ಸಂಖ್ಯೆ ಹೆಚ್ಚಬೇಕು. ದೇಶ ಅಭಿವೃದ್ದಿಯಲ್ಲಿ ಇಂಜನಿಯರ್ ಗಳು ಮಹತ್ವಪೂರ್ಣ ಪಾತ್ರವಹಿಸುತ್ತಾರೆ.
ದೇಶದಲ್ಲಿ ಇಂಜನಿಯರ್ ಗಳಿಗೆ ಉತ್ತಮ ಅವಕಾಶವಿದೆ.

ಉತ್ತಮ ಮನುಷ್ಯರಾಗಲು ಕಠಿಣ ಪರಿಶ್ರಮ ಪಡಬೇಕು. ಸಾಧನೆ ಮಾಡಲು ಗುರಿ ಇರಬೇಕು ಮತ್ತು ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು. ಪದವಿ ಪಡೆದ ವಿದ್ಯಾರ್ಥಿಗಳಿಗೆ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಕೋರುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here