ತುಳುವ ಮಹಾಸಭೆ ಇಂಟರ್ ನ್ಯಾಷನಲ್, ಮೂಲ್ಕಿ ಘಟಕ ಮತ್ತು ಬಂಟರ ಸಂಘ ಮೂಲ್ಕಿ ಇದರ ಸಂಯುಕ್ತಾಶ್ರಯದಲ್ಲಿ ಎಪ್ರಿಲ್ ಹನ್ನೊಂದರಂದು ಮೂಲ್ಕಿಯ ಬಂಟರ ಸಂಘದಲ್ಲಿ ನಡೆಯಲಿರುವ “ಅಪ್ಪೆ ಬೇರ್ ದ ತುಳುನಾಡ್” – ತುಳು ರಾಷ್ಟ್ರೀಯ ವಿಚಾರ ಸಂಕಿರಣದ ಪೂರ್ವಭಾವಿ ಸಭೆ ಪುನರೂರು ಹೋಟೆಲ್ ಸಭಾಂಗಣದಲ್ಲಿ ಘಟಕದ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವಗುತ್ತು ಇವರ ಅಧ್ಯಕ್ಷತೆಯಲ್ಲಿ ಫೆಬ್ರವರಿ ಇಪ್ಪತ್ತೆಂಟರಂದು ನಡೆಯಿತು.
ತುಳು ಮಣ್ಣಿನ ಮೂಲ ಸಂಸ್ಕೃತಿ, ಜಾತಿ-ಉಪಜಾತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಿ, ಮುಂದಿನ ತಲೆಮಾರುಗಳಿಗೆ ತುಳುವ-ತಾಯಿ ಮಡಿಲಿನ ಮಮತೆ-ಪ್ರೀತಿಯನ್ನು ಬಿತ್ತುವ ಕೆಲಸ ಈ ಸಂಕಿರಣದ ಮೂಲಕ ನಡೆಯಬೇಕು ಎನ್ನುವ ಪ್ರಸ್ತಾವನೆಯನ್ನು ತುಳು ವರ್ಲ್ಡ್ ಫೌಂಡೇಶನ್ ಮುಖ್ಯಸ್ಥರಾದ ರಾಜೇಶ್ ಆಳ್ವ ಮಾಡಿದರು.
ಸಭೆಯಲ್ಲಿ ವಿಚಾರ ಸಂಕಿರಣದ ರೂಪುರೇಷೆಯ ಬಗ್ಗೆ ಚರ್ಚಿಸಿ ಅದನ್ನು ವ್ಯವಸ್ಥಿತವಾಗಿ ಆಯೋಜಿಸಲು ಸಮಿತಿ ರಚಿಸಲಾಯಿತು. ಭಾನುಮತಿ ಶೆಟ್ಟಿಯವರು ಅಧ್ಯಕ್ಷರಾಗಿ, ಪುಷ್ಪರಾಜ್ ಚೌಟ ಕಾರ್ಯದರ್ಶಿ, ಹಾಗೂ ಗೀತಾ ಗಣೇಶ್ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ಉಳಿದಂತೆ ಗೌರವ ಮಾರ್ಗದರ್ಶಕರು, ಉಪಾಧ್ಯಕ್ಷರುಗಳು, ಹಾಗೂ ಸಮಿತಿಯ ಕಾರ್ಯಕಾರಿಣಿಗಳಾಗಿ ಕುಬೆವೂರು ಮುರಳೀಧರ ಭಂಡಾರಿ, ಲಯನ್ಸ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರೋಹಿಣಿ ಶೆಟ್ಟಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣ, ಬಿಲ್ಲವ ಸಮಾಜದ ಶಶಿಕಲಾ ಸುವರ್ಣ, ಮೊಗವೀರ ಸಭಾದ ಸುಜೀತ್ ಸಾಲ್ಯಾನ್, ರವೀಶ್ ಕಾಮತ್, ಅಮೂಲ್ಯ ಶೆಟ್ಟಿ, ಭಾರತೀ ಶೆಟ್ಟಿ, ಸರೋಜಿನಿ ಶೆಟ್ಟಿ, ಭಾಸ್ಕರ್ ಕೊಟ್ಯಾನ್, ಸಾಧು ಅಂಚನ್, ಪ್ರಶಾಂತ್ ಶೆಟ್ಟಿ ಮುಂತಾದವರನ್ನು ಆರಿಸಲಾಯಿತು.
ವೇದಿಕೆಯಲ್ಲಿ ತುಳುವ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ವಸಂತ್ ರೈ, ಮಂಗಳೂರು ಸಂಚಾಲಕ ಅರವಿಂದ್ ಬೆಲ್ಚಡ, ಮೂಡಬಿದ್ರೆ ಸಂಚಾಲಕಿ ಜಯಂತಿ ಬಂಗೇರ ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡ ಈ ಸಭೆಯಲ್ಲಿ ತುಳುವ ಮಹಾಸಭೆಯ ಕಾರ್ಯದರ್ಶಿ ಹರಿಪ್ರಸಾದ್ ರೈ ಧನ್ಯವಾದ ಸಮರ್ಪಿಸಿದರು.

