ರೇಡಿಯೊ ಮಣಿಪಾಲ್ ನಲ್ಲಿ ಕಾರಂತ ಯಾನದ 9ನೇ ಸಂಚಿಕೆ

0
6

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್ ಸಮುದಾಯ ಬಾನುಲಿ ಕೇಂದ್ರವು ಡಾ.ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲೆ ಇದರ ಸಹಕಾರದೊಂದಿಗೆ ಅರ್ಪಿಸುತ್ತಿರುವ ಕಾರಂತ ಯಾನ- ಡಾ.ಶಿವರಾಮ ಕಾರಂತರ ಬದುಕು ಬರಹಗಳ ದರ್ಶನ ಸರಣಿ ಕಾರ್ಯಕ್ರಮದ 9 ನೇ ಸಂಚಿಕೆ ಮಾರ್ಚ್ ತಿಂಗಳ ದಿನಾಂಕ 2 ರಂದು ಸೋಮವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ.

ಇಂದಿನ ಸಂಚಿಕೆಯಲ್ಲಿ ಶಿಕ್ಷಕರಾದ ವಿನೋದ ಪ್ರಕಾಶ್ ಪಡುಬಿದ್ರಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಲಿದ್ದಾರೆ. ಮಾರ್ಚ್ 3 ರಂದು ಮಂಗಳವಾರ ಮಧ್ಯಾಹ್ನ 1.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here