ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯಡಿ ಅಕ್ಷಯ ಕಾಲೇಜು ಪುತ್ತೂರು ವತಿಯಿಂದ “ನನ್ನ ಭಾರತಕ್ಕಾಗಿ ಯುವಜನತೆ – ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಆಶಯದೊಂದಿಗೆ ಆಯೋಜಿಸಲಾದ ವರ‍್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಶ್ರೀ ರಾಮಚಂದ್ರ ಪದವಿ ಪರ‍್ವ ವಿದ್ಯಾಲಯದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕರ‍್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನರ‍್ದೇಶಕರಾದ ಕಲಾವತಿ ಜಯಂತ್ ವಹಿಸಿದ್ದರು. ಅಧ್ಯಕ್ಷರಾದ ಜಯಂತ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಏಳು ದಿನಗಳ ಕಾಲ ಪರ‍್ನೆ ಪರಿಸರವನ್ನು ಆಯ್ಕೆ ಮಾಡಿಕೊಂಡು ಶಿಬಿರವನ್ನು ಯಶಸ್ವಿಯಾಗಿ ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಶಿಬಿರರ‍್ಥಿಗಳ ಶ್ರಮ, ಶಿಸ್ತು ಮತ್ತು ಸರ‍್ಪಣಾ ಮನೋಭಾವವನ್ನು ಅವರು ವಿಶೇಷವಾಗಿ ಪ್ರಶಂಸಿಸಿದರು.

ಮುಖ್ಯ ಅತಿಥಿಗಳಾಗಿ ಶೇಖರ್ ರೈ ಕೆ., ಪ್ರಾಂಶುಪಾಲರು, ರಾಮಚಂದ್ರ ವಿದ್ಯಾಲಯ ಅವರು ಉಪಸ್ಥಿತರಿದ್ದು, ಅಕ್ಷಯ ಕಾಲೇಜು ಈ ಬಾರಿ ನಮ್ಮ ಸಂಸ್ಥೆಯನ್ನು ಶಿಬಿರಕ್ಕಾಗಿ ಆಯ್ಕೆ ಮಾಡಿರುವುದು ಸಂತೋಷ ತಂದಿದೆ ಎಂದು ಹೇಳಿದರು. ಆರಂಭದಲ್ಲಿ ಸ್ವಲ್ಪ ಆತಂಕ ಇದ್ದರೂ, ಶಿಬಿರರ‍್ಥಿಗಳು ಏಳು ದಿನಗಳ ಕಾಲ ಶಿಸ್ತಿನಿಂದ ಕರ‍್ಯನರ‍್ವಹಿಸಿ ಪರಿಸರ ಸ್ವಚ್ಛತೆ, ಸಾಮಾಜಿಕ ಜಾಗೃತಿ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಉತ್ತಮ ಮಾದರಿಯನ್ನೇ ನರ‍್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿಯಾಗಿ ಶ್ರೀ ಸತ್ಯನಾರಾಯಣ ರೈ ಕೆ.ಎಂ., ಮುಖ್ಯಗುರುಗಳು, ಶ್ರೀ ರಾಮಚಂದ್ರ ಪ್ರೌಢಶಾಲೆ, ಅಯೋಧ್ಯನಗರ–ಪರ‍್ನೆ ಮಾತನಾಡಿ, ಅಕ್ಷಯ ಸಂಸ್ಥೆಯ ಶಿಸ್ತುಬದ್ಧ ಕರ‍್ಯಪದ್ಧತಿ ಪರ‍್ನೆ ಪರಿಸರದ ಜನಮನ ಗೆದ್ದಿದೆ. ಅಯೋಧ್ಯನಗರವನ್ನು ಹಸಿರುಮಯವಾಗಿಸಲು ಶಿಬಿರರ‍್ಥಿಗಳು ಮಾಡಿದ ಕರ‍್ಯ ಶ್ಲಾಘನೀಯ ಎಂದು ಹೇಳಿದರು.
ಹಾಲು ಉತ್ಪಾದಕರ ಸಂಘದ ಸದಸ್ಯರಾದ ರಮೇಶ್ ಕೋಟ ಅವರು ಶಿಬಿರರ‍್ಥಿಗಳು ಶ್ರಮದಾನದ ಮೂಲಕ ಸುಂದರ ಉದ್ಯಾನವನ ನರ‍್ಮಿಸಿರುವುದನ್ನು ಕೊಂಡಾಡಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾದ ಅರ್ಪಿತ್ ಟಿ.ಎ. ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ (ಓSS) ಎನ್ನುವುದು ಕೇವಲ ಒಂದು ಯೋಜನೆಯಲ್ಲ; ಅದು ವಿದ್ಯರ‍್ಥಿಗಳ ವ್ಯಕ್ತಿತ್ವ ವಿಕಾಸ, ಸಾಮಾಜಿಕ ಹೊಣೆಗಾರಿಕೆ ಮತ್ತು ರಾಷ್ಟ್ರಭಕ್ತಿಯ ಮನೋಭಾವ ಬೆಳೆಸುವ ಶಕ್ತಿಯುತ ವೇದಿಕೆ ಎಂದು ಹೇಳಿದರು. ಶಿಬಿರದ ಯಶಸ್ಸಿಗೆ ಕೈಜೋಡಿಸಿದ ಎಲ್ಲಾ ಗಣ್ಯರು, ಶಿಕ್ಷಕರು, ಗ್ರಾಮಸ್ಥರು ಹಾಗೂ ಸ್ವಯಂಸೇವಕರಿಗೆ ಹೃತ್ಪರ‍್ವಕ ಅಭಿನಂದನೆ ಸಲ್ಲಿಸಿದರು.

ಅನಂತರ ಅಕ್ಷಯ ಕಾಲೇಜಿನ ಉಪಪ್ರಾಂಶುಪಾಲರಾದ ರಕ್ಷಣಾ ಟಿ.ಆರ್. ಅವರು ವಿದ್ಯರ‍್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಓSS ಶಿಬಿರದಲ್ಲಿ ಕಲಿತ ಶಿಸ್ತು, ಸೇವಾ ಮನೋಭಾವ, ಸಹಕಾರ, ನಾಯಕತ್ವ ಹಾಗೂ ಜೀವನಮೌಲ್ಯಗಳನ್ನು ನಿತ್ಯ ಜೀವನದಲ್ಲೂ ಅಳವಡಿಸಿಕೊಂಡರೆ ಮಾತ್ರ ಶಿಬಿರದ ಸರ‍್ಥಕತೆ ಸಾಧ್ಯವೆಂದು ತಿಳಿಸಿದರು. ಸಮಾಜ ಸೇವೆಯ ಮೂಲಕವೇ ಒಳ್ಳೆಯ ನಾಗರಿಕರನ್ನು ರೂಪಿಸಬಹುದು ಎಂದು ವಿದ್ಯರ‍್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿಯಾದ ಕು ಮೇಘ ಶ್ರೀ ಅವರು ಶಿಬಿರದ ಅವಧಿಯಲ್ಲಿ ಕೈಗೊಂಡ ಪರಿಸರ ಸ್ವಚ್ಛತಾ ಕರ‍್ಯಗಳು, ಜಾಗೃತಿ ಕರ‍್ಯಕ್ರಮಗಳು ಹಾಗೂ ಶಿಬಿರರ‍್ಥಿಗಳ ದಿನಚರಿಯ ಕುರಿತು ವಿವರಿಸಿದರು. ಎಲ್ಲಾ ಅತಿಥಿಗಳ ಸಮ್ಮುಕದಲ್ಲಿ ಸ್ರ‍್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಯೋಜನಾಧಿಕಾರಿ ರಾಕೇಶ್ ಕೆ. ಅವರು ಶಿಬಿರದ ಯಶಸ್ಸಿಗೆ ತನು ಮನ ಧನ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ರ‍್ಪಿಸಿದರು. ವರ‍್ಷಿಕ ಶಿಬಿರದಲ್ಲಿ ಉತ್ತಮ ಪ್ರರ‍್ಶನ ನೀಡಿದ “ರ‍್ಮರಾಯ” ತಂಡಕ್ಕೆ ಟ್ರೋಫಿ ಪ್ರದಾನ ಮಾಡಲಾಯಿತು. ಸಹ ಯೋಜನಾಧಿಕಾರಿಗಳಾದ ಗಂರ‍್ವ ಮತ್ತು ಕು. ಸೌಜನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ‍್ಯಕ್ರಮವನ್ನು ಶಿಬಿರರ‍್ಥಿ ಯಶಸ್ವಿ ಪ್ರರ‍್ಥನೆಯೊಂದಿಗೆ ಆರಂಭಿಸಿದರು. ಸ್ವಾಗತ ಭಾಷಣವನ್ನು ರಾಷ್ಟ್ರೀಯ ಸೇವಾ ಯೋಜನೆಯ ಘಟಕ–1ರ ನಾಯಕ ಜಿಗ್ನೇಶ್ ನೆರವೇರಿಸಿದರು. ಧನ್ಯವಾದವನ್ನು ಘಟಕ–2ರ ನಾಯಕಿ ಕೋಮಲಾಕ್ಷಿ ಸಲ್ಲಿಸಿದರು. ಸಮಾರೋಪ ಸಮಾರಂಭದ ಸಂಪರ‍್ಣ ಕರ‍್ಯಕ್ರಮವನ್ನು ಶಿಬಿರರ‍್ಥಿ ಅಕ್ಷಿತ್ ಸಮರ್ಪಕವಾಗಿ ನಿರ್ವಹಿಸಿದರು.

