ಇತ್ತೀಚೆಗೆ ಉತ್ತರಪ್ರದೇಶದ ಲಖನೌನಲ್ಲಿ ವರದಿಯಾದ ಸುದ್ದಿಯನ್ನು ಕೇಳಿದರೆ ಸಸ್ಯಹಾರಿಗಳು ಹೋಟೆಲ್ಗೆ ಹೋಗುವುದನ್ನೇ ನಿಲ್ಲಿಸಿದರೂ ಅನುಮಾನವಿಲ್ಲ. ಸಸ್ಯಹಾರಿ ಹೋಟೆಲ್ನಲ್ಲಿ ಮಾನವನ ದೇಹ ಪತ್ತೆ!
ಲಖನೌನಿನ ಜಿಸಿಆರ್‌ಜಿ ಕಾಲೇಜಿನ ಎದುರಿಗೆ ಇದ್ದ ವೆಜ್ ಬಿರಿಯಾನಿ (Biryani Shop) ಅಂಗಡಿಯೊಂದರ ಫ್ರೀಜರ್ನಲ್ಲಿ ಮಾನವನ ದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅಂಗಡಿ ಮಾಲೀಕನ ತಂದೆ ತೀರಿಹೋಗಿದ್ದು ನಾಲ್ಕು ದಿನಗಳಿಂದ ಅಂಗಡಿಗೆ ಬೀಗ ಹಾಕಿ ಹೋಗಿದ್ದಾನೆ. ನಂತರ ಅಂಗಡಿಗೆ ಮರಳಿದ ಮಾಲೀಕ ಫ್ರೀಜರ್ನ್ನು ತೆಗೆದಾಗ ಅಲ್ಲಿ ಮನುಷ್ಯನ ದೇಹವಿರುವುದು ಗೊತ್ತಾದ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾನೆ.
ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಆ ವ್ಯಕ್ತಿಯ ದೇಹ ಹೇಗೆ ಅಂಗಡಿಯ ಫ್ರೀಜರ್ನ್ನು ಸೇರಿತು ಎಂದು ತಿಳಿದುಬಂದಿಲ್ಲ. ಪೊಲೀಸರು ಅಂಗಡಿಯಲ್ಲಿದ್ದ ಸಿಸಿಟಿವಿ ಪೂಟೇಜ್ನ್ನು ಪಡೆದುಕೊಂಡಿದ್ದು, ಅಂಗಡಿ ಮಾಲೀಕ ಮತ್ತು ಸ್ಥಳೀಯರನ್ನು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.

